Tuesday 1 September 2015

ಮೃತ್ಯುಂಜಯ

ಮೃತ್ಯುಂಜಯ 


                                        2013 ಮಾರ್ಚ್ 8,ಸಮಯ ರಾತ್ರಿ ೧೦:೦೦ ಗಂಟೆ 
        ಮನೆಯಿಂದ ಬರಬೇಕಾದರೆ ಸ್ವಲ್ಪಾನು ಯೋಚನೆ ಮಾಡಿರಲಿಲ್ಲ ಆದರೆ ಇಲ್ಲಿಗೆ ಬಂದ ಮೇಲೆ ಸಾವಿರಾರು ಯೋಚನೆ ತಲೆಗೆ ಬಂದು ಅಪ್ಪಳಿಸುತ್ತ ಇತ್ತು . ಸಾಯೋಕೆ ೧೦ ಕಾರಣ ಬೇಕಾದರೆ ಬದುಕೋಕೆ ಒಂದು ಕರಣ ಸಾಕು ಅಂತ ನಂಗೆ ಗೊತ್ತಿತ್ತು , ಆ ಒಂದು ಕಾರಣ ಹುಡುಕುತ ಇದ್ದೆ ನನ್ನ ಸುತ್ತಲು ಇದ್ದ ಕತ್ತಲು ನನ್ನ ತಲೆಯಲ್ಲೂ ಆವರಿಸಿತ್ತು ಸಾಯೋಕೆ ಧೈರ್ಯ  ಹೆಚ್ಚಾಗ್ತಿತ್ತು ಬದುಕೋಕೆ ಭಯ ಆಗ್ತಾ ಇತ್ತು ಅವಾಗ ರೈಲ್ವೆ announcement ನನ್ನ ಗಮನ ಅದರ ಹತ್ತಿರ ಸೆಳಿತು "ಗಾಡಿ ಸಂಖ್ಯಾ 16089 ಚಾಲುಕ್ಯ express  ಕೆಲವೇ ಕ್ಷಣದಲ್ಲಿ ಆಗಮಿಸಲಿದೆ ".
     ನಾನು Platform ಮೇಲೆ ನಿಂತುಕೊಂಡಿರಲಿಲ್ಲ  ಅದರ ಎದುರಗಡೆ ಮಣ್ಣಿನ ದಿಬ್ಬದ ಮೇಲೆ ಕೂತುಕೊಂಡಿದ್ದೆ, platform ಮೇಲಿಂದ ಜಿಗಿದರೆ ಜನ ಇಳಿದು ನನ್ನನ್ನ ಕಾಪಾಡ್ತಾರೆ , ಅದಕ್ಕೆ ಮಣ್ಣಿನ ದಿಬ್ಬದ ಮೇಲೆ ಕೂತುಕೊಂಡಿದ್ದೆ. ಟ್ರೈನ್ ಸ್ಟೇಷನ್ ಒಳಗೆ ಬಂದ ತಕ್ಷಣ track ಮೇಲೆ ಹಾರಿಬಿಡಬೇಕು ಇಷ್ಟನ್ನೆ ನಾನು ಅಂದುಕೊಂಡಿದ್ದು . ಎದೆ ಬಡಿತ ಜೋರಾಗಿ ಇತ್ತು ನನ್ನ ಗಮನ ಸಂಪೂರ್ಣವಾಗಿ signal ಮೇಲೆ ಇತ್ತು, ಅದು ಇನ್ನು red signal ತೋರ್ಸ್ತಾ ಇತ್ತು ಬರೋಕೆ ಇನ್ನು ಹತ್ತು ನಿಮಿಷ ಅನ್ನೋ ಅಂದಾಜು ಹಾಕಿದ್ದೆ . 
        ಸ್ಟೇಷನ್ ಏನು ದೊಡ್ಡದಾಗಿ ಇರಲಿಲ್ಲ platform 3 ಮಾತ್ರ ನಾನು 3ನೇ Platform track ಎಡಗಡೆ ಸ್ಟೇಷನ್ boundary ಅಂದರೆ ಅಲ್ಲಿ ಬೇಲಿ ಹಾಕಿದ್ದರು ಅದರ ಮುಂದೆ ಇದ್ದ  ಮಣ್ಣಿನ ದಿಬ್ಬದ ಮೇಲೆ ಕೂತುಕೊಂಡಿದ್ದೆ, Train  ಸ್ಟೇಷನ್ ಒಳಗೆ ಬಂದು ನನ್ನಿಂದ 5-6 ಮೀಟರ್ ದೂರ ಇದ್ದಾಗ ನಾನು ಹಾರಿದರೆ ಆಯಿತು ಅದು 10 secondಗಳಲ್ಲಿ ನನ್ನನ್ನ ಅದು ಬಂದು ತಲುಪತ್ತೆ ಜವರಾಯ ನನಗೋಸ್ಕರ AC Coachನಲ್ಲಿ ಬರ್ತಾ ಇದಾನೆ ಖಂಡಿತ ನನ್ನನ್ನ ಕರಕೊಂಡು ಹೋಗ್ತಾನೆ,  Announcement  ಮತ್ತೆ  ಆಯಿತು ಇನ್ನೇನು 5-6 ನಿಮಿಷದಲ್ಲಿ ಬರೋ ಲಕ್ಷಣ ಕಾಣುತ್ತ ಇತ್ತು, track ಪಟ್ಟಿ ಮೇಲೆ ಕಿವಿ ಇಟ್ಟು ಕೇಳಿದರೆ Train ಬರತಿರೋದು ಗೊತ್ತಾಗುತ್ತೆ ಅಂತ ಎಲ್ಲೊ ಕೇಳಿದ್ದೆ ಆದರೆ ಇವಾಗ ಕೆಳಗೆ ಇಳದು ಆ ಕೆಲಸ ಮಾಡೋ ಮನಸು ಇರಲಿಲ್ಲ ಯಾಕಂದರೆ  ಮನಸ್ಸು ಧೃಡ ಆಗಿತ್ತು ಒಂದೆ ಸರಿ ಹಾರೋದು ಒಂದು ಸರಿ ಹಾರಿದ ಮೇಲೆ ವಾಪಸ್ಸು ಬಾರೋ ಹಾಗೆ ಇಲ್ಲ, ಒಂದು ಸರಿ ನನ್ನ ಸುತ್ತಲನ್ನೆಲ್ಲ ಕಣ್ಣು ಆಡಿಸಿದೆ ಎದುರುಗಡೆ Platform ಅಲ್ಲಿ ಸುಮಾರು 50-60 ಜನ ಇದ್ದರು, Platform ಮೇಲೆ ನಿಂತಿದ್ದ ಜನರು "Platform ಬಿಟ್ಟು ಅಲ್ಲಿ ಯಾಕೆ ಕೂತಿದಾನೆ ಇವನಿಗೇನು ತಲೆ ಕೆಟ್ಟಿದೆಯಾ?!!!" ಅನ್ನೋ ರೀತಿ ಯಲ್ಲಿ ನನ್ನ ನೋಡ್ತಾ ಇದ್ದರು , ಕೂತ್ಕೊಳೋಕೆ ದೊಡ್ಡದಾಗಿ ಏನು ನನಗೆ ಜಾಗ ಇರಲಿಲ್ಲ ಆ ಸಣ್ಣ ಜಾಗದಲ್ಲೆ ಮುಂದೆ ಬೀಳದ ಹಾಗೆ ಹಿಂದೆ ವರಕೊಳ್ಳದ ಹಾಗೆ ಕೂತಿದ್ದೆ ಹಿಂದಕ್ಕೆ ಬೇಲಿ ಇತ್ತು ಒರಗಿದರೆ ಚುಚ್ಚುತಿತ್ತು ನನ್ನ ಎದೆಯಲ್ಲಿ ಇರೋ ನೋವಿನ ಮುಂದೆ  ಅದರ ಪರಿಣಾಮ ದೊಡ್ಡದಾಗಿ ಏನು ಇರಲಿಲ್ಲ.
    "ಛಾಯ್ ಛಾಯ್ ಛಾಯ್  ಗರಮಾ ಗರಂ ಛಾಯ್"Platform ಅಲ್ಲಿ ಒಬ್ಬ ಸಣ್ಣ ಹುಡುಗ ಟೀ ಮಾರಾಟ ಮಾಡ್ತಾ ಇದ್ದ, ಮನಸಿಗೆ ತುಂಬಾ ಬೇಸರ ಅನಿಸಿತು ಅವನಿಗೂ ಅದು ಎಷ್ಟೋ ಕಷ್ಟಗಳು ಇವೆ ಆದರು ಕಷ್ಟ ಪಟ್ಟು ಅವನು ಅವನದು ಸಂತೋಷಾನ ಸಂಪಾದನೆ ಮಾಡತ ಇದಾನೆ, ನನಗೆ ನನ್ನ ಮೇಲೆ ನಾಚಿಕೆ ಆಯಿತು ಏನೇನೊ ಯೋಚನೆಗಳು ತಲೆಗೆ  ಬಂದು ಅಪ್ಪಳಿಸೋಕೆ ಶುರು ಆಯಿತು "ಬೇಡ ಇವತ್ತು ಬೇಡ ನಾಳೆ ಬರೋಣ" ಈ ತರ ಸಾವಿರಾರು ಯೋಚನೆ. ಏನು ಮಾಡಬೇಕು ತೊಚತ ಇಲ್ಲ ಒಂದು ಸರಿ ತಲೆ ಮೇಲೆ ಒಂದು ದೊಡ್ಡ ಕಲ್ಲು ಬಿದ್ದ ಹಾಗೆ ಅನಿಸಿತು, ಕಣ್ಣು ಮುಚ್ಚುಕೊಂಡು ತಲೆ ಮೇಲೆ ಕೈ ಇಟ್ಟುಕೊಂಡು ಊಸಿರನ್ನ ಬಿಗಿ ಹಿಡಿದು ಎರಡು ನಿಮಿಷ ಹಾಗೆ ಕೂತುಕೊಂಡೆ ನಂತರ ತಲೆ ಎತ್ತಿ ತಕ್ಷಣ Signal ಕಡೆ ನೋಡಿದೆ ಯಾಕಂದರೆ Trainನ ಶಬ್ದ ಕಿವಿಗೆ ಬಂದು ಅಪ್ಪಳಿಸಿತ್ತು, Train ಬರ್ತಾ ಇದೆ ಇನ್ನೇನು ಎರಡು ನಿಮಿಷದಲ್ಲಿ ಅದು ಬಂದು ಬಿಡುತ್ತೆ, ಕಣ್ಣು ಮುಚ್ಚಿಕೊಂಡು ಏನು ಯೋಚನೆ ಮಾಡದೆ ಇವತ್ತೆ ನನ್ನ ಜೀವನಕ್ಕೆ ಅಂತ್ಯ ಕೊಡೋಕೆ ಅಂದುಕೊಂಡೆ ಯಾರು ನನಗೆ ಎಷ್ಟೇ ಪ್ರೇರಣೆ ನೀಡಲಿ ನನ್ನ ಜೀವನ ಉದ್ದಾರ ಆಗೋಲ್ಲ ಇಂದು ಈ ಜೀವಕ್ಕೆ ಅಂತ್ಯ ಕೊಡೋಣ "ಮುಂದಿನ ಜನ್ಮದಲ್ಲಾದರೂ ನನಗೆ ಇಂತ ಪರಿಸ್ಥಿತಿ ಕೊಡಬೇಡ ತಂದೆ " ಅಂತ ಒಂದು ಸರಿ ದೇವರ ಹತ್ತಿರ  ಬೇಡುಕೊಂಡೆ.
      Train ಬರೋಕೆ ಇನ್ನೇನು 2 ನಿಮಿಷ ಇತ್ತು ಕಣ್ಣು ಮುಚ್ಚಿ ಉಸಿರನ್ನ ತೊಗೊಳೋದು ಬಿಡೋದು ಮಾಡ್ತಾ ಇದ್ದೆ, ಎದೆ ಬಡಿತ ಜೋರಾಗಿ ಇತ್ತು ಸಿಕ್ಕಾಪಟ್ಟೆ ಮೈ ಎಲ್ಲ ಬೆವತು ಹೋಗಿತ್ತು ಕಿವಿಗೆ Train ಶಬ್ದ ಬಿಟ್ಟರೆ ಇನ್ನೇನು ಕೇಳಿಸುತ್ತ ಇರಲಿಲ್ಲ, ಆದರೆ ಒಂದೇ ಸಮನೆ ಜನ ಎಲ್ಲ ಕಿರಚೋಕೆ ಶುರು ಮಾಡಿದರು, "ನಾನು ಕಣ್ಣು ಮುಚ್ಚಿದೀನಿ ಇನ್ನು ಹಾರಿಲ್ಲ ಯಾಕೆ ಕಿರಚತ    ಇದಾರೆ ? " ನಾನು ಕಣ್ಣು ಬಿಟ್ಟು ನೋಡಿದೆ ಒಂದು ಸರಿ current shock ಹೊಡೆದ ಹಗೆ ಆಯಿತು , ಸಣ್ಣ ಮಗು ಸುಮಾರು    ೩ ರಿಂದ ೪ ವರ್ಷ Track ಮೇಲೆ ಬಿದ್ದಿದೆ ತಲೆಗೆ ಕಾಲಿಗೆ ಎಟಾಗಿದೆ, Train ಇನ್ನೇನು ಒಂದು ನಿಮಿಷದಲ್ಲಿ ಬಂದು ಬಿಡುತ್ತೆ  ಆ ಹುಡಗಿಗೆ ಸಂಬಂಧ ಪಟ್ಟೂರು ಇಬ್ಬರು ೨ನೆ Platform ಇಂದ ಓಡಿ ಬರ್ತಾ ಇದಾರೆ ಅಲ್ಲಿ ಇದ್ದೋರು ಯಾರು ಇಳಿಯೋಕೆ ತಯಾರು ಇಲ್ಲ ಅಷ್ಟು ಧೈರ್ಯ ಅಲ್ಲಿ ಯಾರಿಗೂ ಇರಲಿಲ್ಲ ಎಲ್ಲ ಮೂಖ ಪ್ರೇಕ್ಷಕರು.
    ಆವಾಗ ನನ್ನ ತಲೆ ಯಲ್ಲಿ ಬಂದಿದ್ದು ಒಂದೇ ವಿಚಾರ "ನಾನು ಕಾಪಾಡಬೇಕು " ಹೇಗೋ ಸಾಯೋಕೆ ಅಂತ ಬಂದಿದೀನಿ ಒಂದು ಹುಡುಗಿ ಪ್ರಾಣ ಉಳಿಸಿ ಸಾಯೋಣ , ನಾನು ರೆಡಿ ಅದೇ track ಮೇಲೆ ಜಿಗಿಯೋಕೆ, ಆ ಹುಡಗೀನಾ ಹಿಡಿದು Platform ಮೇಲೆ ಎತ್ತಿ ಎಸಿಬೇಕು ಅಲ್ಲಿ ಇರೋರು ಅವಳನ್ನ ಹಿಡ್ಕೋತಾರೆ ಅಷ್ಟರಲ್ಲಿ Train ಬಂದು ನನ್ನ ಹೊಡ್ಕೊಂಡು ಹೋಗಿರುತ್ತೆ. ನಂದು Suicide ಆಗೋಲ್ಲ ವೀರ ಮರಣ ಆಗುತ್ತೆ ಒಂದು ಜೀವ ಉಳಿಸಿದಕ್ಕೆ ಅಜರಾಮರ ಆಗ್ತೀನಿ ನನ್ನ ಹೆಸರು Tv ಅಲ್ಲಿ, ಪೇಪರ್ ಅಲ್ಲಿ ಬರುತ್ತೆ . ನನ್ನಲ್ಲಿ ಇದ್ದ ಬೇಸರ ,ಭಯ ಹೋಗಿತ್ತು , ನನ್ನ ಹತ್ತಿರ ಕೇವಲ ಅರ್ಧ ನಿಮಿಷ ಇತ್ತು ಇವೆಲ್ಲ ಯೋಚನೆ ಮಾಡೋಕೆ ಅರ್ಧ ನಿಮಿಷ ಹಾಳು ಮಾಡಿದ್ದೆ.  ಸಾಯೋಕೆ ಭಯ ಇರಲ್ಲಿಲ್ಲ ಮನಸಲ್ಲಿ ತೃಪ್ತಿ ಇತ್ತು ಆದರು ಕಣ್ಣಲ್ಲಿ ನೀರು ತುಂಬಿತ್ತು ಎಡಗಾಲು ನಡಗುತ ಇತ್ತು , ಉಸಿರು ಬಿಗಿ ಹಿಡಿದು ಮನಸು ಗಟ್ಟಿ ಮಾಡಿ ಎರಡನೆ ಆಲೋಚನೆ ಇಲ್ಲದೆ ಕೆಳಗೆ ಹಾರಿದೆ ..

                                            2013 ಮಾರ್ಚ್ 8,ಸಮಯ ಸಂಜೆ 7:00 ಗಂಟೆ
            ಸಾಯೋಕೆ ಅದು ಹೇಗೆ ಮನಸ್ಸು ಬರುತ್ತೆ ಏನೋ, ನಾವು ಹಾಕೊಂಡಿರೋ ಬಟ್ಟೆ ಶಾಶ್ವತ ಅಲ್ಲ ಕೈ ಅಲ್ಲಿ ಇರೋ ದುಡ್ಡು ಶಾಶ್ವತ ಅಲ್ಲ ಈ ದೇಹಾನು ಶಾಶ್ವತ ಅಲ್ಲ ಅಂದ ಮೇಲೆ ನಮ್ಮ ಕಷ್ಟಗಳು ಹೇಗೆ ಶಾಶ್ವತ ಆಗುತ್ತೆ, ಎರಡು ಜೊತೆ ಚಪ್ಪಲಿ ತೊಗೊಳೋ ಅಷ್ಟು ಯೋಗ್ಯತೆ ಇರಲಿಲ್ಲ ಹೇಗೋ ಕಷ್ಟ ಪಟ್ಟಿ ಓದಿ ಮುಗಿಸಿ ಅವರ ಇವರ ಕಾಲು ಹಿಡಿದು ರೈಲ್ವೆ ಡಿಪಾರ್ಟ್ಮೆಂಟ್ ಅಲ್ಲಿ ಮೊದಲಿಗೆ ರೈಲ್ವೆ ಸಹಚಾಲಕ ಅಂತ ಕೆಲಸ ಕೊಟ್ಟರು ನಂತರ ೧೦ ವರ್ಷ ಬಳಿಕೆ ರೈಲ್ವೆ ಮುಖ್ಯ ಚಾಲಕ ಅಂದ್ರೆ "Local Pilot Shunter " ಅಂತ ನನಗೆ ಪ್ರಮೋಷನ್ ಕೊಟ್ಟಾಗ ನಾನು ಜೀವನದಲ್ಲಿ ಒಂದು ನೆಲೆ ಕಂಡಿದ್ದು, ನನಗೆ ಕೊಟ್ಟಿದ್ದು ಚಾಲುಕ್ಯ Express .
       ಈ Trainಗೆ ಬಂದ ಮೇಲೆ ನೆಮ್ಮದಿ ಅನ್ನೋದು ಹಾಳಾಗಿ ಹೋಗಿತ್ತು, ಕೇವಲ ಆರು ತಿಂಗಳಲ್ಲಿ ೧೨ ಜನ ಈ Train ಕೆಳಗೆ ಸಿಕ್ಕು ಅವರ ಪ್ರಾಣ ಕಳೆದುಕೊಂಡಿದ್ರು ಕೆಲವರದು accident ಇನ್ನು ಕೆಲವರದು Suicide, ದೇಹ ತುಂಡು ತುಂಡು ಅಗೋ ಶಬ್ದ ಕೇಳಿ ಹೊಟ್ಟೆ ಒಳಗೆ ಸಂಕಟ ಆಗ್ತಾ ಇತ್ತು , ಒಂದು ಸರಿ ಅಂತು ಇಬ್ಬರು ಪ್ರೇಮಿಗಳು ಹಾರಿದರು ತಕ್ಷಣ ಬ್ರೇಕ್ apply ಮಾಡಿದೆ ಆದರೆ ಇದು ಬಸ್, ಕಾರು ತರ ತಕ್ಷಣ ನಿಲ್ಲೋಲ. ಎಷ್ಟೋ ಸರಿ ಕೆಲಸ ಬಿಡೋಣ ಅಂದುಕೊಂಡೆ ಆದರೆ ಹೊಟ್ಟೆ ಪಾಡು  ಸರ್ಕಾರಿ ಕೆಲಸ ಬಿಡೋ ಹಾಗೆ ಇಲ್ಲ.
       ದಿನ ಇದೆ ತರ ಏನೋ ಯೋಚನೆ ಮಾಡ್ತಾ ಅಥವಾ ನನ್ನ Assistantಗಳ ಹತ್ತಿರ ಮಾತಾಡ್ತಾ ಕಾಲ  ಕಳಿತಿನಿ, ಅಷ್ಟೊಂದು ಏನು ಕೆಲಸ ಇರೋಲ್ಲ ವೇಗದ ಮಿತಿ ಕಾಪಾಡಿ ಸರಿಯಾದ ಸಮಯಕ್ಕೆ ಸ್ಟೇಷನ್ ತಲುಪಿದರೆ ಸಾಕು ಒಳಿದದ್ದೆಲ್ಲ ಅಸಿಸ್ಟೆಂಟ್ ನೋಡ್ಕೋತಾರೆ ಆದರೆ ಇವತ್ತು ಲೇಟ್ ಆಗಿತ್ತು ಮುಂದಿನ ಸ್ಟೇಷನ್ ಗೆ ಹತ್ತು ಗಂಟೆಗೆ ಹೋಗಬೇಕಾಗಿ ಇತ್ತು ಆದರೆ ಇವಾಗ ಆಗಲೇ 10:15 ಆಗಿತ್ತು
 "ಸರ್ ಇವತ್ತು ಮುಂದಿನ ಸ್ಟೇಷನ್ ಅಲ್ಲಿ ಜಾಸ್ತಿ ಹೊತ್ತು ನಿಲ್ಲಿಸೋದು ಬೇಡ ಟೈಮ್ ಕವರ್ ಮಾಡಬೇಕು"
"ಸರಿ ಹಾಗೆ ಮಾಡಿ "
      Gair lever ನ loose ಮಾಡಿ ನಿಧಾನವಾಗಿ break apply ಮಾಡಿ ನಂತರ ವೇಗ ಹತೋಟಿಗೆ ಬಂದ ಮೇಲೆ ಪೂರ್ತಿ ಆಗಿ break ಹಾಕಬೇಕು ಎಲ್ಲಾ ಮುಂಚೆಯೇ ಲೆಕ್ಕ  ಹಾಕಿರೋದರಿಂದ  ಸರಿಯಾಗಿ ಹೋಗಿ ಸ್ಟೇಷನ್ ಅಲ್ಲಿ ನಿಲ್ಲುತ್ತೆ.
          Train  ಸ್ಟೇಷನ್ ಹತ್ತಿರ ಬಂತು Mobile ಅಲ್ಲಿ ಮೆಸೇಜ್ ಓದ್ತಾ ಇದ್ದೆ ಸುರೇಶ(Assistant ) ಗಾಬರಿಯಿಂದ ನನ್ನ ಹತ್ತಿರ ಬಂದು
"ಸರ್ ಒಂದು ಸರಿ ಮುಂದೆ ನೋಡಿ ನನಗೆ ಭಯ ಆಗ್ತಾ ಇದೆ!!! "
 ನಾನು ತಕ್ಷಣ ಇಣುಕಿ ನೋಡದೆ ಈ ಸರಿ Shockಗೆ ಎದೆ ಜೋರಾಗಿ ಹೊಡ್ಕೋಳೋಕೆ ಶುರು ಆಯಿತು ಇದೇನು ಮೊದಲನೆ ಸರಿ ಅಲ್ಲ ಆದರೆ ಇ ಸರಿ ಒಂದು ಸಣ್ಣ ಮಗು, ನನ್ನ ಎಡಗಡೆ Platform ಮೇಲೆ ಇದ್ದ ಜನರು  ಸುಮ್ಮನೆ ನಿಂತಿದ್ದರು, ನನ್ನ ಗಮನ ತಕ್ಷಣ ನನ್ನ ಬಲಗಡೆ ಮಣ್ಣಿನ ದಿಬ್ಬದ ಮೇಲೆ ಇತ್ತು, ಅದರ ಮೇಲೆ ಕೂತಿದ್ದ ಒಬ್ಬ ತಕ್ಷಣ ಎದ್ದು ನಿಂತು ಏನೋ ಯೋಚನೆ ಮಾಡಿ ಹಾರಿಯೇ ಬಿಟ್ಟ ,ಇನ್ನು ಅವನ ಹತ್ತಿರ ಸುಮಾರು ಅರ್ಧ ನಿಮಿಷ ಇತ್ತು , ಏನು ಯೋಚನೆ ಮಾಡದೆ ಆ ಮಗುನ ಎತ್ತಿ Platform ಮೇಲೆ ಇದ್ದ ಒಬ್ಬನ ಹತ್ತಿರ ಬಿಸಾಡಿದ ಅವ್ನು ಗಟ್ಟಿಯಾಗಿ ಹಿಡ್ಕೊಂಡು ಹಿಂದೆ ಸರಿದ ಇನ್ನು ಸುಮಾರು 30 Seconds ಇತ್ತು ಆದರೆ ಅವನು ಹಾಗೆ ನಿಂತು ಕೊಂಡುಬಿಟ್ಟ.
"ಏಯ್ ಹೋಗು ಹಾರು ಅಲ್ಲಿ ಕೈ ಕೊಡ್ತಿದಾರೆ ಹೋಗು ಹಿಡಕೋ"
ಜೋರಾಗಿ ಕೋಗಿ ಓಳಗೆ ಬಂದು ಕಣ್ಣು ಮುಚ್ಚಿ ಕೀವಿ ಮುಚ್ಕೊಂಡು ಕುಳ್ತ್ಕೊಂಡಿ ಬಿಟ್ಟೆ.
        ಏನೋ "ಟಪ್ ಟಪ್ "ಅಂತ ಶಬ್ದ ಕಿವಿಗೆ ಕೇಳಸ್ತು ಸ್ವಲ್ಪ ಮುಂದೆ ಹೋಗಿ Train ನಿಂತುಕೊಂಡಿತು ಕಣ್ಣು ಬಿಟ್ಟು ಎದ್ದೋನೆ ತಕ್ಷಣ ಸುರೇಶನ ಮುಖ ನೋಡದೆ
"ನನಗು ಗೊತ್ತಿಲ್ಲ ಸರ್ ನೋಡೋ ಧೈರ್ಯ ನಾನು ಮಾಡಲಿಲ್ಲ "
    Platform ಮೇಲೆ ಇಳಿದು ಇಬ್ಬರು ನೋಡೋಕೆ ಹೊರ್ಟಿವಿ ದೂರದಿಂದ ಏನು ಸ್ಪಷ್ಥವಾಗಿ ಕಾಣ್ತಾ ಇರಲಿಲ್ಲ ಹತ್ತಿರ ಹೋದಾಗ ಅಲ್ಲಿ ಎರಡು ಗುಂಪು ಆಗಿತ್ತು , ನಾನು ಮೊದಲನೆ ಗುಂಪಿನ ಹತ್ತಿರ ಹೋದೆ ಅಲ್ಲಿ ಆ ಮಗುವಿನ ತಂದೆ ಆ ಮಗುವನ್ನು ಸಮಾಧಾನ ಪಡಿಸ್ತಾ ಇದ್ದರು ಹಾಗೆ ಮುಂದೆ ಎರಡನೆ ಗುಂಪಿನ ಹತ್ತಿರ ಹೋದೆ ಭಯ ನನ್ನಲ್ಲಿ ಜಾಸ್ತಿ ಆಗ್ತಾ ಇತ್ತು ಛೇ ನಾನು ನೋಡೋಕೆ ಬರಲೇ ಬಾರದಾಗಿತ್ತು ಅಂತ ಅನಿಸೋಕೆ ಶುರು ಆಯಿತು ಹಾಗೆ ಮುಂದೆ ಹೋದೆ ಜನರೆಲ್ಲರನ್ನು ಸರಿಸಿ ಬಗ್ಗಿ ಕೆಳಗೆ ನೋಡಿದಾಗ ಅವನು ಹಾಗೆ ಕೆಳಗೆ ಮಲಗಿದ್ದ, ಮಲಗಿದ್ಡೋನು ಹಂಗೆ ಎದ್ದು ನಿಂತುಕೊಂಡ.
           ಅವನು ಬದುಕಿದ್ದ ನನಗೆ ಸಮಾಧಾನ ಆಯಿತು ಕೇವಲ ಸ್ವಲ್ಪ ಕಾಲಿಗೆ ಏಟು ಆಗಿತ್ತು ಅಷ್ಟೇ , ಹತ್ತು ನಿಮಿಷ ಕಾದೆ ಅವನ ಜೊತೆ ಮಾತಾಡೋಕೆ  ಆಮೇಲೆ ಅವನು ಸಿಕ್ಕ ಮಾತಾಡೋಕೆ
"Hello ,ಶಭಾಶ್ ನಿಮ್ಮನ್ನ ಮತ್ತೆ ನೋಡಿ ಖುಷಿ ಆಯಿತು,ತುಂಬಾ ಧೈರ್ಯ ಬಿಡಿ ನಿಮಗೆ"
"ಧನ್ಯವಾದ "
"ನಿಮ್ಮ ಹೆಸರು?"
"ಮೃತ್ಯುಂಜಯ "
"Hi ,ನನ್ನ ಹೆಸರು ಸಂಜೀವ್ ಕುಮಾರ್ ಈ ಟ್ರೈನ್ ಮುಖ್ಯ ಚಾಲಕ ಇಂಜಿನ್ ಬಿಟ್ಟು ಕೆಳಗೆ ಬರಬಾರದು ಆದರು ಕೆಳಗೆ ಬಂದದ್ದು ನಿಮಗೆ ಒಂದು ಪ್ರಶ್ನೆ ಕೇಳೋಕೆ, ಆ ಹುಡಗಿ ಕಾಪಾಡಿ ಅಲ್ಲೇ ಯಾಕೆ ನಿಂತು ಕೊಂಡ್ರಿ ತಕ್ಷಣ ಹಾರಿದರೆ ನಿಮ್ಮ ಕಾಲಿಗೂ ಏನು ಆಗ್ತಾ ಇರಲಿಲ್ಲ "
"ಗೊತ್ತಿಲ್ಲ , ನನಗೆ ಅವಾಗಲು ಏನು ಗೊತ್ತಾಗಲಿಲ್ಲ ಇವಾಗಲು ಏನು ಗೊತ್ತು ಆಗ್ತಾ ಇಲ್ಲ "
"ಏನೆ ಅದ್ರು ನೀವು ಬಹಳ ದೊಡ್ಡ risk ತಗೊಂಡಿದಿರ ಇವತ್ತು ನಿಮಗೆ ಒಳ್ಳೆದಾಗಲಿ ಮತ್ತೆ ಇತರ ಸನ್ನಿವೇಶ ಬರೋದು ಬೇಡ ನಾನು ಬರ್ತೀನಿ Bye!!!"

                     ನಾನು ಬದುಕಿದ್ದೆ ನನಗಿನ್ನೂ ಆಶ್ಚರ್ಯ ಆಗ್ತಾ ಇತ್ತು ನನ್ನ ಒಂದೊಂದು ಉಸಿರು ನಾನು ಅನುಭವಿಸುತ್ತ ಇದ್ದೆ, ಜನ ಅಭಿನಂದನೆ ಹೇಳಿ ಅವರವರ ದಾರಿಗೆ ಅವರವರ ಊರಿಗೆ ಹೋದರು ಆದರೆ ನಾನು ಅಲ್ಲೇ ಕೊಳಿತುಕೊಂಡಿದ್ದೆ ನನಗೆ ಹೋಗು ಬದುಕೋ ಹೋಗು ಅಂತ ನನ್ನ ದೂಕಿದ ಆ ಕೈಗಳನ್ನ ಆ Track ಅಲ್ಲಿ ಹುಡುಕುತ ಇದ್ದೆ ನನಗೆ ಅವಾಗ ಹಿಂದಿನ ನೋವು ಇರಲಿಲ್ಲ ಮುಂದಿನ ಪರಿವೆ ಇರಲಿಲ್ಲ ಕೇವಲ ಆ ಕ್ಷಣವನ್ನ ಅನುಭವಿಸುತ್ತ ಇದ್ದೆ, ಬೀದಿ ದೀಪದ ಮಂದ ಬೆಳಕು ನನ್ನ ಮೇಲೆ ಬೀಳುತ್ತಿತ್ತು  ತಂಪಾದ  ಗಾಳಿ ಬೀಸುತಿತ್ತು ಅವಾಗ ನನಗೆ ಒಂದು ವಿಷಯ ಗೊತ್ತಾಯಿತು ದೇವರು ಮನುಶ್ಯನನ್ನ ಪ್ರೀತಿಸಲಿಕ್ಕೆ ವಸ್ತುಗಳನ್ನ ಉಪಯೋಗಿಸಲಿಕ್ಕೆ ಹುಟ್ಟಿಸಿದ್ದು ಆದರೆ ನಾವು ವಸ್ತು ಗಳನ್ನ ಪ್ರೀತಿಸುತ್ತೇವೆ ಮನುಷ್ಯರನ್ನ ಉಪಯೋಗಿಸುತ್ತೇವೆ, ಜನರು ಸ್ವರ್ಗ ಹುಡ್ಕೊಂಡು ಎಲ್ಲೆಲೋ ಹೋಗ್ತಾರೆ ಆದರೆ ಅದು ಎವತ್ತು ನಮ್ಮಲ್ಲೇ ಇರುತ್ತೆ ಕೇವಲ ಕಣ್ಣು ತೆರೆದರೆ ಸಾಲದು ಮನಸನ್ನು ತೆರೆಯಬೆಕು.  
       

                                                       
                                                                     

No comments:

Post a Comment