Monday 28 March 2016

Flush



         
         


                "ಅರುಣ್!ಅರುಣ್!  ನಿನಗೆ ಎಷ್ಟು ಸರಿ ಹೇಳಿದೀನಿ!!!Toiletಗೆ ಹೋಗಿ ಬಂದ ಮೇಲೆ Flush ಮಾಡು ಅಂತ ಹಾಗೆ ಬರ್ತಿ ಅಲ್ಲ  ನಾಲ್ಕನೆ ಕ್ಲಾಸ್ ನಿನೀಗ ಇದು ನೀನು ನಾಲ್ಕನೆ ಸರಿ ಹೀಗೆ ಮಾಡ್ತಾ ಇರೋದು, ಹೋಗು ಬೇಗ ರೆಡಿ ಆಗು ಸ್ಕೂಲ್ಗೆ"

   "ಮಾತಾಜಿ , ಮೊದಲು ಇದ್ದ toilet ಚೆನ್ನಾಗಿ ಇತ್ತು ಈ ಹೊಸ toilet ಅಲ್ಲಿ ಕೂತು ಮಾಡೂದು ಕಷ್ಟ ಆಗುತ್ತೆ"
"Comod ಅಂತ ಕರಿತಾರೆ ಅದುಕ್ಕೆ ನೀವೆಲ್ಲ ಆರಾಮಾಗಿ ಇರಲಿ ಅಂತ infosys ಅವರು donation ಕೊಟ್ಟು ಒಳ್ಳೆ ಬಟ್ಟೆ, ಊಟ, bed ಎಲ್ಲ ಕೊಟ್ಟಿದಾರೆ, ನಿನಗೇನೂ ಗೊತ್ತು ಅನಾಥ ಆಶ್ರಮ ನಡಿಸೋದು ಎಷ್ಟು ಕಷ್ಟ ಅಂತ, ಬರಿ ಗಲೀಜು ಮಾಡೋದು ಗೊತ್ತು"
"ಹೋಗು ಬೇಗ ಸ್ಕೂಲ್ ಗೆ late ಆಯ್ತು"

ರಾತ್ರಿ ಸುಮಾರು ಎಂಟು  ಗಂಟೆ

Watchmen(ಗುಂಡಣ್ಣ): "ಅಮ್ಮ tuitionಗೆ ಹೋಗಿದ್ದ ಆ ಮಕ್ಕಳೆಲ್ಲ ಬಂದರಾ, ಗೇಟ್ ಬೀಗ ಹಾಕ್ಲ?"

"ಒಂದು ನಿಮಿಷ ತಡಿ ನೋಡ್ತೀನಿ"
"ಮಕ್ಕಳೆ ಎಲ್ಲರೂ ಬಂದಿದಾರಲ್ಲ"
"ಮಾತಾಜಿ , ಅರುಣ್ ಇನ್ನ ಶಾಲೆ ಇಂದ ಬಂದೆ ಇಲ್ಲ"
"ಏನು!!!, ರಾಮ ರಾಮ ಈ ಹುಡುಗ ಇನ್ನು ಎಷ್ಟು ಕಾಟ ಕೊಡ್ತಾನಪ್ಪ!!!"
"ಗುಂಡಣ್ಣ ಬಾಗಲು ಹಾಕಬೇಡ, ಹೋಗಿ ಶಾಲೆ ಹತ್ತಿರ ಸುತ್ತ ಮುತ್ತ ಅರುಣ್ ಹುಡುಕಿ ಕರ್ಕೊಂಡು ಬಾ, ಅವನು ಬರಲಿ ಇದೆ ಅವನಿಗೆ ಇವತ್ತು!!!"

ಗುಂಡಣ್ಣ ೧೦ ಗಂಟೆಗೆ ಸುಮಾರು ಎಲ್ಲ ಕಡೆ ಹುಡುಕಿ ವಾಪಸ್ಸು ಬರ್ತಾನೆ. 

"ಅಮ್ಮ ಎಲ್ಲ ಕಡೆ ಹುಡುಕಿದೆ,ವಿಚಾರಿಸಿದೆ ಎಲ್ಲು ಸಿಗಲಿಲ್ಲ, ಏನು ಮಾಡೋದು ಇವಾಗ"

"ನಾಳೆ ಬೆಳಿಗ್ಗೆ ತನಕ ನೋಡೋಣ ಬರಲಿಲ್ಲ ಅಂದರೆ ಬೆಳಿಗ್ಗೆ ಹೋಗಿ ಪೋಲಿಸ್ complaint ಕೊಟ್ಟರೆ ಆಯಿತು, ಎಷ್ಟೇ ಆದರು ಅನಾಥ ಅವನ ಬಗ್ಗೆ ತಲೆ ಕೆಡಸಿ ಕೊಳ್ಳೋರು ಯಾರು ಇದಾರೆ"

"ಮತ್ತೆ ನಿಮ್ಮ ಕಣ್ಣಲಿ ನೀರು ಯಾಕೆ ತುಂಬಿಕೊಂಡಿದೆ?"

"ಏನು ಇಲ್ಲ ಹೋಗಿ ನೀನು ಮಲಗು ನಾಳೆ ನೋಡೋಣ"

   ನೀರು ಇರಲೇ ಬೇಕು ಕರಳಿನ ಸಂಕಟ ಇನ್ನೊಬ್ಬರಿಗೆ ಹೇಗೆ ಗೊತ್ತಾಗುತ್ತೆ , ಅವನು ತುಂಟ, ತರಲೆ ಆದರೆ ಅವನಲ್ಲಿ ಒಂದು ಮುಗ್ದತೆ ಇತ್ತು ನನ್ನ ಮೇಲೆ ಪ್ರೀತಿ ಇತ್ತು, ನಾನು ಈ ಆಶ್ರಮಕ್ಕೆ ಬಂದು ವೈದೇಹಿ ಇಂದ ಮಾತಾಜಿ ಆಗಿ ೫ ವರ್ಷ ಆಗಿದೆ, ನಾನು ಬಂದಾಗ ೨೦ ಹುಡುಗರು ಇದ್ದರು ಇವಾಗ ೧೫, ಮುಂಚೆ ಇದ್ದವರೆಲ್ಲ ಬೇರೆ ಕಡೆ ನೆಲೆ ಕಂಡಿಕೊಂಡರು ಅದರಲ್ಲಿ ಉಳಿದವನು ಅರುಣ್ ಮಾತ್ರ ಇವಾಗ ಇರೋ ೧೫ ಹುಡುಗರು ಎಲ್ಲರೂ ಹೊಸಬರು ಅರುಣ್ ಒಬ್ಬನನ್ನು ಬಿಟ್ಟು, ಅವನು ಬಂದಾಗ ೪ ವರ್ಷದ ಮಗು ಅವನನ್ನು ನಾನು ಎಲ್ಲ ಮಕ್ಕಳಿಗಿಂತ ಜಾಸ್ತಿ ಕಾಳಜಿ ತೋರಸ್ತ ಇದ್ದೆ, ಅವನನ್ನು ನೋಡಿದಾಗ  ನಾನು ಕಳೆದುಕೊಂಡ ನನ್ನ ಮಗುವಿನ ನೆನಪು ಆಗೋದು.   

  ರಾತ್ರಿ ಸುಮಾರು ೧೨ ಗಂಟೆ 
(ಫೋನ್ ರಿಂಗ್ ಆಗುತ್ತೆ)
"ಹಲೋ ಇದು ಶ್ರೀ ಕೃಷ್ಣ ಅನಾಥ ಅಶ್ರಮಾನಾ?"
"ಹೌದು ಯಾರು ನೀವು ಇಷ್ಟು ಹೊತ್ತಲ್ಲಿ ಫೋನ್ ಮಾಡಿದ್ದು?"
"ನಾವು ಇಲ್ಲಿ ಬಸವನಗುಡಿ ಪೋಲಿಸ್ ಸ್ಟೇಷನ್ ಇಂದ ಮಾತಾಡ್ತಾ ಇರೋದು, ನಿಮ್ಮ ಆಶ್ರಮದ ಒಬ್ಬ ಹುಡುಗ ನಮಗೆ ಸಿಕ್ಕಿದಾನೆ ಬಂದು ಕರ್ಕೊಂಡು ಹೋಗಿ"

      ನಾನು ಗುಂಡಣ್ಣ ತಕ್ಷಣ ಹೊರಟ್ವಿ, ಪೋಲಿಸ್ ಸ್ಟೇಷನ್ ಗೆ  ಹೋದಾಗ ಅರುಣ್ ಬಹಳ ಹೆದರಿಕೊಂಡು ಒಂದು ಮೂಲೆ ಅಲ್ಲಿ ಕೂತಿದ್ದ ನನ್ನ ನೋಡಿ ಓಡಿ ಬಂದು ತಬ್ಬಿಕೊಂಡ,
head constable ನನ್ನ ಹತ್ತಿರ ಬಂದು "ಅಮ್ಮ ಇವನು ಯಾರಿಂದಾನೋ ತಪ್ಪಿಸಿಕೊಂಡು ಓಡಿ ಹೋಗ್ತಾ ಇದ್ದ ನಾವು ನೋಡಿ ಇವನನ್ನ ತಡದು ಇಲ್ಲಿಗೆ ಕರ್ಕೊಂಡು ಬಂದ್ವಿ, ಬಹಳ ಹೆದರಿಕೊಂಡಿದಾನೆ ಕರ್ಕೊಂಡು ಹೋಗಿ, ನನಗೆ ಅನಿಸುತ್ತೆ ಯಾವುದೊ ನಾಯಿ ಅಟ್ಟಿಸಿಕೊಂಡು ಬಂದಿರಬೇಕು"

                  ನಾನು ಅವನನ್ನ ಕರ್ಕೊಂಡು ಆಶ್ರಮಕ್ಕೆ ಬಂದ್ವಿ, ಅವನಿಗೆ ಜೋರಾಗಿ ನಿದ್ದೆ ಬಂದಿತ್ತು ಅವನಿಗೆ ನಾನು ಏನು ಕೇಳಲು ಹೋಗಲಿಲ್ಲ ಅವನು ವಾಪಸ್ಸು ಬಂದಿದ್ದ ನನಗೆ ಅಷ್ಟು ಸಾಕಾಗಿತ್ತು.

ಮಾರನೆ ದಿನ ಬೆಳಿಗ್ಗೆ 7 ಗಂಟೆಗೆ.
   
             ಅರುಣ್ ಅವತ್ತು ಬೇಗನೆ ಎದಿದ್ದ  ನನ್ನ ಕೋಣೆಗೆ ಏನೋ ಹೇಳೋಕೆ ಬಂದಿದ್ದ ಅನಿಸುತ್ತೆ, ಆದರೆ ನಾನು ಅವನನ್ನ ಮೊದಲು ನೋಡಿ ಅವನ ಹತ್ತಿರ ಬಂದೆ ಅವನ ಹತ್ತಿರ ಏನೋ ವಾಸನೆ ಬರ್ತಾ ಇತ್ತು ಸರಿಯಾಗಿ ಅಂಡು ತೊಳದಿರಲಿಲ್ಲ ಸೀದ toilet ಗೆ ಕರ್ಕೊಂಡು ಹೋದೆ ಆದರೆ ಮತ್ತೆ ಈ ಸರಿ ಕೂಡ Flush ಮಾಡಿರಲಿಲ್ಲ.

"ಅರುಣ್!!! ಎಷ್ಟು ಸರಿ ಹೇಳ್ಬೇಕು ನಿನಗೆ ಮಂಗ!!! ಸ್ವಲ್ಪನು ಹೇಳಿದ್ದು ಅರ್ಥಾನೆ ಆಗಲ್ವ ನಿನಗೆ....ಇದು ಬೆಳ್ಳಗೆ ತೊಂಡೆಕಾಯಿ ತರ ಇದೆ ಅಲ್ಲ ಈ buttonನ press ಮಾಡಬೇಕು ಎಷ್ಟು ಸರಿ ಹೇಳೋದು ಅರುಣ್ ನಿನಗೆ"

ಆಶ್ರಮದ ಒಬ್ಬ ಹುಡುಗ: " ಮಾತಾಜಿ ನಿಮ್ಮನ್ನ ಆನಂದ್ ಸರ್ ಕರಿತಾ ಇದಾರೆ"
     
           ಆನಂದ್. ಕುಲಕರ್ಣಿ ನಮ್ಮ ಆಶ್ರಮದ trustee ಅವರು ವಾರಕ್ಕೆ ಕೇವಲ ೩ ದಿನ ಮಾತ್ರ ಆಶ್ರಮದ ಕಡೆಗೆ ಬರ್ತಾ ಇರ್ತಾರೆ ಆದರೆ ಇವತ್ತು ಯಾಕೆ ಬಂದರು ನನಗೆ ಅರ್ಥ ಆಗ್ಲಿಲ್ಲ.

ಆನಂದ್: "ವೈದೇಹಿ ಅವರೇ ಬನ್ನಿ ಇವರು ಶಂಕರ್ ಪ್ರಸಾದ್ ಮತ್ತೆ ಅವರು ಸುಜಾತಾ ಪ್ರಸಾದ್ ಅಂತ, ತುಮಕೂರು ಅಲ್ಲಿ ಇರ್ತಾರೆ ಇಲ್ಲಿ ಒಬ್ಬ ಮಗುನ ದತ್ತು ತೊಗೊಳೋಕೆ ಬಂದಿದಿದಾರೆ, ಬೆಳಗ್ಗೆ ಏನಾಯ್ತು ಅಂದರೆ ಅವರು ಹೀಗೆ ಆಶ್ರಮ ಸುತ್ತುತ್ತ ಇರಬೇಕಾದರೆ ಅರುಣ್ ನೋಡಿದಾರೆ ಅವನು ಇಷ್ಟ ಆಗಿದಾನೆ ಅವನನ್ನ ಕರ್ಕೊಂಡು ಹೋಗ್ತಾರೆ ಅಂತೆ. "

"ಅಯ್ಯೋ ಅವನ!!! ಸರ್ ಅವನು ತುಂಬಾ ತುಂಟ ಹುಡುಗ ಅವನನ್ನ ಸಂಭಾಳಿಸೋದು ಬಹಳ ಕಷ್ಟ"

ಶಂಕರ್ ಪ್ರಸಾದ್ : "ಇರಲಿ ನಮಗೆ ಅಂತ ಹುಡುಗನೇ ಇಷ್ಟ, ಮತ್ತೆ ನಾವು ಇವತ್ತೇ ಅವನನ್ನ ಕರ್ಕೊಂಡು ಹೋಗ್ತೀವಿ ಯಾಕಂದರೆ ಒಂದು ಪೂಜೆ ಮಾಡಿಸಬೇಕು ಅದನ್ನ ಮಾಡಿಸಿ ನಾವು ಮುಂಬೈಗೆ ಹೋಗ ಬೇಕು ಸಮಯ ಬಹಳ ಕಡಿಮೆ ಇದೆ "

ಆನಂದ್: "ಏನು ತೊಂದರೆ ಇಲ್ಲ ದಾರಾಳವಾಗಿ ಕರ್ಕೊಂಡು ಹೋಗಿ"

                            ನಾನು ಒಂದು ಮಾತು ಮಾತಾಡಲಿಲ್ಲ ತಕ್ಷಣ ಓಡಿ ಹೋಗಿ bathroom ಅಲ್ಲಿ ಮುಖ ತೊಳೆದು ಕೊಂಡೆ ನನ್ನ ಕಣ್ಣ ನೀರು ಯಾರಿಗೂ ಕಾಣದಿರಲಿ ಅಂತ, ಎಲ್ಲರೂ ಅರುಣ್ ಗೆ  congrats ಹೇಳ್ತಾ ಇದ್ದರು ಆದರೆ ನನಗೆ ಗೊತ್ತು ಅವನಿಗೆ ಇದು ಇಷ್ಟ ಇಲ್ಲ ಅಂತ, ನಾನು ಅವನ ಬ್ಯಾಗ್ ಪ್ಯಾಕ್ ಮಾಡ್ತಾ ಇದ್ದೆ .

"ಮಾತಾಜಿ ಬೇಡ ಮಾತಾಜಿ, ಅವರಿಗೆ ಹೇಳಿ ನಾನು ಬರಲ್ಲ ಅಂತ, ನನಗೆ ನೀವು ಬೇಕು  ನೀವು ಹೇಳಿದ ಹಾಗೆ ಕೇಳ್ತೀನಿ, flush ಮಾಡ್ತೀನಿ ಯಾರಿಗೂ ಕಾಡಿಸೋಲ್ಲ , please !!! please !!!"

"ಇನ್ನ ಒಂದು ಮಾತು ಮಾತಾಡಿದರೆ ಒದೆ ಬೀಳುತ್ತೆ ಸುಮ್ನೆ ಹೋಗು!!!"

            ಆ ನನ್ನ ಮಾತಿನ ಹಿಂದ ಎಷ್ಟು ನೋವು ಇತ್ತು ಕೇವಲ ನನಗೆ ಗೊತ್ತಿತ್ತು, ಅವನು ಅಳ್ತಾನೆ ಅವರ ಹತ್ತಿರ ಹೋದ ಅವರು ಇಬ್ಬರು ಅವನನ್ನ ಸಮಾಧಾನ ಮಾಡ್ತಾ ಇದ್ದರು.

"ಶಂಕರ್ ಅವರೇ ನಿಮ್ಮ ಮನೆಯಲ್ಲಿ ಇರೋದು comod ಅಥವಾ normal toilet?"

"ಇಲ್ಲ normal Indian ಟಾಯ್ಲೆಟ್"

               ನಾನು ಒಂದು ಸರಿ ಅವನನ್ನು ದಿಟ್ಟಿಸಿ ನೋಡಿದೆ  ಅವನು ಹೋದ ನನ್ನ ನೋಡ್ತಾ ಹಾಗೆ ಅಳುತ್ತ ಹೋದ ನಾನು ಅವತ್ತು ಒಂದು ನಿರ್ಧಾರ ತೊಗೊಂಡೆ ಯಾವ ಮಕ್ಕಳನ್ನು ಹಚ್ಚಿಕೊಳೋದು ಬೇಡ, ಇಲ್ಲಿ ಯಾರು ಶಾಶ್ವತವಾಗಿ ಇರೋಲ್ಲ.


ಬೆಳಿಗ್ಗೆ ಸುಮಾರು ೧೧:೦೦ ಗಂಟೆಗೆ

ಗುಂಡಣ್ಣ: "ಅಮ್ಮ ಯಾರೋ ಇಬ್ಬರು ಗಂಡ ಹೆಂಡತಿ ಬಂದಿದಾರೆ ನಿಮ್ಮನ್ನ ಹುಡುಕಿಕೊಂಡು.."

"ಯಾರು ನೀವು ನಿಮಗೆ ಯಾರು ಬೇಕಾಗಿತ್ತು?"
"ನನ್ನ ಹೆಸರು ಗೋಪಾಲ್ ರಾವ್ ಈಕೆ ನನ್ನ ಹೆಂಡತಿ ನಾವು ನಮ್ಮ ಮಗನನ್ನ ಕರ್ಕೊಂಡು ಹೋಗೋಕೆ ಬಂದಿದಿವಿ"
"ಯಾರು ನಿಮ್ಮ ಮಗ ?"
"ಈ ಫೋಟೋದಲ್ಲಿ ಇರೋ ಹುಡುಗ ಇವಳೇ ನನ್ನ ಹೆಂಡತಿ ನಮ್ಮ ಮಗು ನಾಲ್ಕು ವರ್ಷದವನು ಇದ್ದಾಗ ನಮಗೆ ಸಕೊಕೆ ಆಗೋಲ್ಲ ಅಂತ ತಂದು ಇಲ್ಲಿ ಬಿಟ್ಟಿದ್ದಳು."
     
                   ನನಗೆ ಆ ಫೋಟೋ ನೋಡಿದ ತಕ್ಷಣ ಅಚ್ಚರಿ ಆಯಿತು, ಅದೆ ಫೋಟೋ ನಮ್ಮ ಆಶ್ರಮದ anniversery ದಿನ ನಾನು photographerಗೆ ಹೇಳಿ ತೆಗಿಸಿದ್ದೆ, ಅದು ಅರುಣ್ ನಾಲ್ಕು ವರ್ಷ ಇದ್ದಾಗ ತೆಗಿಸಿದ ಫೋಟೋ, ನಾನು ತಕ್ಷಣ ಅವರ ಹತ್ತಿರ ಇದರ ಬಗ್ಗೆ ಕೇಳೋಣ ಅಂತ ಅಂದುಕೊಂಡು ನೋಡಿದರೆ ಬಂದಿದ್ದವನ ಜೇಬಿಂದ ಹೊರಗೆ ನುಸುಳುತಿದ್ದ ಕತ್ತಿ ನನಗೆ ಕಾಣಿಸಿತು ತಕ್ಷಣ ಅವರನ್ನ ಒಂದು ಕೋಣೆಯಲ್ಲಿ ಕೊಡಿಸಿ ಅವರಿಗೆ ಟೀ/ಕಾಫಿ ಕೊಟ್ಟು ನಾನು ಪೋಲಿಸರಿಗೆ call ಮಾಡಿದೆ, ಅವಾಗ ನನಗೆ ಒಂದು ವಿಷಯ ಹೊಳೆದಿದ್ದು ನಿನ್ನೆ ರಾತ್ರಿ ೧೧ರ ಸುಮಾರು ಅರುಣ್ ಪೊಲೀಸರಿಗೆ ಸಿಕ್ಕಿದ್ದು,ಇವತ್ತು ಬೆಳಿಗ್ಗೆ  ಇಬ್ಬರು ಬಂದು ಅವನನ್ನ ಕರೆದುಕೊಂಡು ಹೋಗಿದ್ದು, ಬಹಳ ತಲೆ ಓಡಿಸಿ ಅವರ ೧೫ ನಿಮಿಷ ಸಮಯ ವ್ಯರ್ಥ ಮಾಡಿದೆ, ಬಹಳ ಬೇಗನೆ head constable ಮುನಿಲಿಂಗಪ್ಪ ಜೊತೆ S.I ಹರಿಪ್ರಸಾದ್ ಬರ್ತಾರೆ ಆ ೧೫ ನಿಮಿಷ ಭಯದಲ್ಲಿ ಕಳೆದು ಒಂದೊಂದು ನಿಮಿಷ ಒಂದೊಂದು ಯುಗದ ಹಾಗೆ ಭಾಸವಾಗಿತ್ತು.....

                                           S.I  ಒಳಗೆ ಬರೋದು ಅವರಿಗೆ ಗೊತ್ತಾಗಿ ಅವರು ತಕ್ಷಣ ಹೊರಗೆ ಬಂದು ಕತ್ತಿಯಿಂದ  ಹೆದರಿಸೋಕೆ ಶುರು ಮಾಡಿದರು ನಾನು ಅವಾಗ ಹೊರಗೆ ಗಾರ್ಡನ್ ಹತ್ತಿರ ಇದ್ದ ನೀರಿನ ಪೈಪ್ ಇಂದ ನಾನು ಅವರಿಗೆ ನೀರನ್ನ ಎರಚಿದೆ, ಅವಾಗ ತಕ್ಷಣ ಮುನಿಲಿಂಗಪ್ಪ ಅವರು ಅವರಿಬ್ಬರನ್ನ ಹಿಡಿದರು, ಅವಾಗ ಅವರನ್ನ ವಿಚಾರಿಸಿದಾಗ ಅವರು ಹೇಳಿದ್ದು "ನಮಗೇನು ಗೊತ್ತಿಲ್ಲ ಸರ್, ಚಕ್ರಪಾಣಿ ಅಂತ ನಮ್ಮ ಸ್ನೇಹಿತ ಈ ಫೋಟೋ ಕೊಟ್ಟಿ ಇದನ್ನ ತೋರಿಸಿ ಈ ಹುಡುಗನನ್ನ ಹೇಗಾದರೂ ಮಾಡಿ ಕರ್ಕೊಂಡು ಬಾ ಜೊತೆಗೆ ಯಾವುದೇ ಕಾರಣಕ್ಕೂ ಅವನ ಬ್ಯಾಗ್ ತರೋದು ಮರಿಬೇಡ ಅಂತ ಹೇಳಿ ಕಳಿಸಿದ್ದ.... "

                        ಅವರನ್ನ custody ಒಳಗೆ ತಗೊಂಡು ಅವರ ವಿಚಾರಣೆ ಶುರು ಮಾಡಿದ್ದರು ಆದರೆ ನನ್ನ ಹಾಗು ಪೋಲಿಸ್ ಅವರ ಚಿಂತೆ ಆಗಿದ್ದು  ಮುಂಚೆ ಬಂದು ಕರೆದುಕೊಂಡು ಹೋದವರು ನಿಜವಾಗಲು ದತ್ತು ತೊಗೊಳೋಕೆ ಬಂದವರೇ? S.I ಅವರು ಆನಂದ್ ಅವರ ಹತ್ತಿರ ಶಂಕರ್ ಅವರ number, address ತಗೊಂಡರು ಆದರೆ ವಿಚಾರಿಸಿದಾಗ ಅದು fake ಅಂತ ಗೊತ್ತಾಯ್ತು, ಅವರು ಆನಂದ್ ಅವರಿಗೆ ೨೫ ಸಾವಿರ ಕೊಟ್ಟು ಯಾವುದೆ ಸರಿಯಾದ proof ಕೊಡದೆ ಕರೆದುಕೊಂಡು ಹೋಗಿದ್ದರು, ಆನಂದ್ ಅವರಿಗೆ ದುಡ್ಡಿನ ಚಪಲ ಬಹಳ ಇತ್ತು  ಆದರೆ ಇಂತ ಕೆಲಸ ಮಾಡ್ತಾರೆ ಅಂತ ನಾನು ಅಂದು ಕೊಂಡಿರಲಿಲ್ಲ , ನನಗೆ ಅವಾಗ ಆತಂಕ ಜಾಸ್ತಿ ಆಯಿತು ಏನು ಮಾಡಿದರೋ ಆ ಪುಟ್ಟ ಮಗುನ ಎಂಬ ಭಯ ಹೆಚ್ಚಾಗಿತ್ತು. ನಮ್ಮ ಅಶ್ರಮದ ಮುಂಬಾಗಿಲ ಹತ್ತಿರ CCTV  ಹಾಕಿದ್ದರು ಅದನ್ನು ಪೊಲೀಸರು ನೋಡಿದಾಗ, ಅವರು ಶಂಕರ್ ನನ್ನ ಗುರುತಿಸಿದರು ಅದು ಶಂಕರ ಅಲ್ಲ ಅವನು ೩-೪ ಕಳ್ಳತನದ ಕೇಸ್ ಅಲ್ಲಿ  ಸಿಕ್ಕಿ ಹಾಕಿಕೊಂಡಿದ್ದ ವೆಂಕಟೇಶ್ alias ವೆಂಕಿ ಆಗಿದ್ದ, ಅವನ trace ಆಗಿ ಇಟ್ಟಿಕೊಂಡು ಪೋಲಿಸ್ ಅವರು ಅವರಿಗೆ ಗೊತ್ತಿರೋ informersನ ಹುಡುಕಿ ಅವರಿಂದ ಅವನ ಬಗ್ಗೆ ಸುಳಿವನ್ನು ಪಡಿಯುತ್ತಾರೆ ನಂತರ ಅವರಿಗೆ ಒಬ್ಬ informer ಇಂದ ಗೊತ್ತಾಗೋದು ಅವನು ಒಂದು ಹೊಸ ಮನೆ ಇತ್ತೀಚಿಗಷ್ಟೇ ತಗೊಂಡಿರೋ ವಿಚಾರ, ತಕ್ಷಣ ಅಲ್ಲಿಗೆ S.I ಅವರು ಅವರ ಇಬ್ಬರು constables ಕರೆದುಕೊಂಡು ನಡಿತಾರೆ, ನನ್ನ ಹಟಕ್ಕೆ ಬೇಸತ್ತು ಕೊನೆಗೆ ನನ್ನನ್ನು ಕರೆದು ಕೊಂಡು ಹೋಗ್ತಾರೆ.


ಸಮಯ ಸುಮಾರು ಸಂಜೆ 7  ಗಂಟೆ
ಮನೆ ಊರಿಂದ ತೀರ ದೂರ  ಅಕ್ಕ ಪಕ್ಕ ಯಾವ ಮನೆಯು ಇಲ್ಲ, ತಾವರೆಕೆರೆ ಬಳಿ ಒಂದು ಫ್ಯಾಕ್ಟರಿಯ ಹಿಂದೆ ಒಂದು ಸಂಧಿ ಯಲ್ಲಿ  ಇತ್ತು, ಬಾಗಿಲು ತೆರದಿತ್ತು ಒಳಗಿಂದ ಯಾರೋ ಒಬ್ಬರು ಜೋರಾಗಿ ಕೂಗ್ತಾ ಇದ್ದರು "ನೋಡು ವೆಂಕಿ ಒಂದು ನಿಮಿಷ ನನಗೆ ಆ ಬ್ಯಾಗ್ ಕೊಡು ಆ ಹುಡುಗನನ್ನ ನೀನೆ ಇಟ್ಟಿಕೋ, ಸರಿ ಶೇರ್ 50:50 ತೊಗೊಳೋಣ ಹಠ ಮಾಡಬೇಡ ನನ್ನ ಮಾತು ಕೇಳು!!! ಕೈಗೆ ಸಿಕ್ಕಿರೋ ಚಿನ್ನಗೋಸ್ಕರ ನಾವಿಬ್ಬರು ಜಗಳವಾಡಿ ಕೊನೆಗೆ ಅದು ಮೂರನೆಯವನಿಗೆ ಸಿಗಬಾರದು"
ಅಷ್ಟರಲ್ಲಿ ಪೊಲೀಸರು ಒಳಗೆ ನುಗ್ಗಿ ಚಕ್ರಪಾಣಿ, ವೆಂಕಿ ಮತ್ತು ಅವನ ಹೆಂಡತಿಯನ್ನು ಹಿಡಿದು ಒಂದು ಮೂಲೆಯಲ್ಲಿ ಕೂಡಿಸಿ ಇಬ್ಬರಿಗೂ ಏನು ಕೇಳದೆ ಮೊದಲಿಗೆ ಎರಡು ಮೂರು ಏಟು ಕೊಡ್ತಾರೆ.ಆದರೆ ನನ್ನ ಅರುಣ್ ಅಲ್ಲಿ ಎಲ್ಲೂ ಇರೋದಿಲ್ಲ .

S.I: "ಏನು deal ಅಂತ ಬಿಡಿಸಿ ಎಲ್ಲ correct ಆಗಿ ಬಾಯಿ ಬಿಟ್ಟರೆ ಸರಿ ಇಲ್ಲ ಅಂದರೆ ನಿನ್ನ ಸ್ಟೇಷನ್ ಗೆ ಕರ್ಕೊಂಡು ಹೋಗೋಲ್ಲ ಅಲ್ಲಿ ಒಳಗೆ ನಿನ್ನ ಹಾಕೋಕೆ ಜಾಗ ಇಲ್ಲ , ಇಲ್ಲೆ ನಿನ್ನೆ ಹೂತು ಹಾಕೇ ಹೋಗೋದು"

ಚಕ್ರಪಾಣಿ: "ಸರ್ ನನಗೇನು ಗೊತ್ತಿಲ್ಲ ಸರ್ ಈ ವೆಂಕಿನೆ ಆ ಮಗುನ ಕರ್ಕೊಂಡು ಬಂದಿದ್ದು, ನನಗು ಇದಕ್ಕೂ ಸಂಬಂಧ ಇಲ್ಲ"

        ವೆಂಕಿಗೆ ಏಟು ಬಹಳ ಜೋರಗಿ ಬಿದಿತ್ತು ಅವನು ಬಹಳ ಹೆದರಿದ್ದ S.I ಒಂದು ಸರಿ ಅವನನ್ನ ದಿಟ್ಟಿಸಿ ನೋಡಿದಕ್ಕೆ ಹೆದರಿ ಎಲ್ಲ ಬಾಯಿ ಬಿಡೋಕೆ ಮೊದಲು ಅವನು ಶುರು ಮಾಡಿದ್ದೂ

ವೆಂಕಿ: "ಸರ್ ಏನಾಗಿದ್ದು ಅಂದರೆ ನಾನು ನಿನ್ನೆ ಇವನ ಮನೆ ಹತ್ರ ಹೋದಾಗ ಅವನು ಯಾರೋ ಇಬ್ಬರಿಗೆ ಹೀಗೆ ಆಶ್ರಮಕ್ಕೆ ಹೋಗಿ ಈ ಹುಡುಗನನ್ನ ಕರೆದುಕೊಂಡು ಬನ್ನಿ ಅಂತ ಹೇಳ್ತಾ ಇದ್ದ ನಾನು ಅದುಕ್ಕೆ ಅವರಿಬ್ಬರಿಗಿಂತ ಮುಂಚೆ ಹೋಗಿ ಕರೆದು ತಂದು ಲಾಭದಲ್ಲಿ ನಂದು ಪಾಲು ಕೇಳೋಣ ಅಂದುಕೊಂಡಿದ್ದೆ.. "

S.I: " ಚಕ್ರಪಾಣಿ ನಿಜವಾಗಿ ಆ ಮಗು ಎಲ್ಲಿದೆ ಅಂತ, ಯಾಕೆ ಕರೆದುಕೊಂಡು ಬಂದೆ ಅಂತ ಹೇಳ್ತಿಯಾ ಇಲ್ಲ ಅಂದರೆ.... "

ಚಕ್ರಪಾಣಿ: "ಆ ಹುಡುಗ ಇಲ್ಲೇ toilet ಗೆ  ಹೋಗಿದಾನೆ, ಸರ್ ನಿಜ ಹೇಳ್ತೀನಿ MBP ಅಂತ ಅಮೇರಿಕಾದು ಒಂದು ದೊಡ್ಡ ಕಂಪನಿ ಅದುಕ್ಕೆ ನಮ್ಮ ಕರ್ನಾಟಕದ ಯಾವುದೋ  ಒಂದು ಭಾಗ ದಲ್ಲಿ ಪ್ಲಾಟಿನಂ ಸಿಗುತ್ತೆ ಅಂತ ಗೊತ್ತಾಗಿದೆ ಅದು ನಮ್ಮ  Geology Department ಅವರಿಗೂ ಗೊತ್ತು ಆದರೆ ಅಲ್ಲಿ ಮೈನಿಂಗ್ ಮಾಡಿದರೆ ಪ್ರಕೃತಿ ಬಹಳ ನಾಶವಾಗುತ್ತೆ ಅದುಕ್ಕೆ ಅವರು ಈ ವಿಷಯವನ್ನ ಮುಚ್ಚಿ ಇಟ್ಟಿದಾರೆ ನಾನು ಅಲ್ಲೇ ಕೆಲಸ ಮಾಡೋದು ,ನಾನು ಅದುನ್ನ ಕದ್ದು ಅವರಿಗೆ ಆ information ಕೊಟ್ಟರೆ ಅವರು ನನಗೆ ಹತ್ತು ಕೋಟಿ ಕೊಡೋಕೆ ಸಿದ್ದವಾಗಿದ್ದರು, ನಿನ್ನೆ ಅದು ಪೋಲಿಸ್ ಅವರಿಗೆ ಗೊತ್ತಾಗಿ ನನ್ನ chase ಮಾಡಿದರು ನಾನು ಓಡಿ ಹೋಗೋವಾಗ ಈ ಹುಡುಗ ಸಿಕ್ಕಿದ ಇವನನ್ನ ಇಟ್ಕೊಂಡು blackmail ಮಾಡಿ ಅಲ್ಲಿಂದ ತಪ್ಪಿಸಿಕೊಂಡೆ ಆ information ಇದ್ದ memory card ಪೋಲಿಸ್ ಅವರಿಗೆ ಸಿಗಬಾರದು ಅಂತ ನಾನು ಆ cardನ ಒಂದು choclate ಒಳಗೆ ಹಾಕಿ ಅದನ್ನ ನಾನು ಅವನ ಬ್ಯಾಗ್ ಒಳಗೆ ಹಾಕಿದ್ದೆ ಆದರೆ ಅವನು ರಾತ್ರಿ ನನ್ನಿಂದ ತಪ್ಪಿಸಿಕೊಂಡು ಓಡಿ ಹೋದ ಅದುಕ್ಕೆ ಕರೆದುಕೊಂಡು ಬರೋ ಪ್ಲಾನ್ ಹಾಕಿದ್ದು , ಅಷ್ಟರಲ್ಲಿ ಅದುನ್ನ ಕೇಳಿಸಿಕೊಂಡು ಅವನನ್ನ ಈ ವೆಂಕಿ ಕರೆದುಕೊಂಡು ಬಂದ"

S.I: "ಏನು ಹತ್ತು ಕೋಟಿನಾ!!!! ವೆಂಕಿ ಆ ಬ್ಯಾಗ್ ಎಲ್ಲಿ?"

ವೆಂಕಿ :"ಸರ್ ಆ ರೋಮ್ ಅಲ್ಲಿ  ಇದೆ"

S.I : "ವೆಂಕಿ ಎಲ್ಲಿ ಇದರಲ್ಲಿ ಯಾವ choclate ಇಲ್ಲ ಏನು ಮಾಡಿದೆ?"

ವೆಂಕಿ ಹೆಂಡತಿ: "ಸರ್ ಆ ಹುಡುಗ ಬೆಳಿಗ್ಗೆ  ಹಠ ಮಾಡ್ತಿದ್ದ ಅದುಕ್ಕೆ ಆ choclateನ ಕೊಟ್ಟೆ ಆದರೆ ಅವನು ತಿನ್ನಲಿಲ್ಲ ಕೋಪ ಮಾಡ್ಕೊಂಡು ಜೇಬಲ್ಲಿ ಇಟ್ಕೊಂಡ"

                 S.I, head constable ಇಬ್ಬರು toilet ಬಾಗಿಲು ತಟ್ಟೋಕೆ ಶುರು ಮಾಡ್ತಾರೆ ಇಷ್ಟು ಹೊತ್ತು ಆ ಮಗು ಮೇಲೆ ಇಲ್ಲದ ಯೋಚನೆ ಒಂದೇ ಸಮನೆ ಬಂದು ಬಿಡುತ್ತೆ ಅರುಣ್ ಹೆದೆರಿಕೊಂಡು ಬಾಗಿಲು ತೆಗಿದು ಹೊರಗೆ ಬರ್ತಾನೆ ನನ್ನ ಅವನ ಹತ್ತಿರ ಹೋಗೋಕೆ ಬಿಡೋದಿಲ್ಲ, constable ಅವನ ಚಡ್ಡಿ, ಅಂಗಿ ಎಲ್ಲ ಚೆಕ್ ಮಾಡ್ತಾರೆ

S.I: "ಮರಿ ನಿನ್ನ ಹತ್ತಿರ ಒಂದು chocolate ಇತ್ತು ಅಲ್ಲ ಅದು ನನಗೆ ಕೊಡ್ತಿಯಾ ನಾನು ನಿನಗೆ ದೊಡ್ಡದು ಕೊಡ್ತೀನಿ"

ಅರುಣ್: "ಯಾವುದು eclairs ಆ ಅದು ನಾನು ಅವಾಗೆ ತಿಂದೆ ಅದು ಚೆನಾಗಿಲ್ಲ ಸರ್ ಗಂಟಲಲ್ಲಿ ಸ್ವಲ್ಪ ಸಿಕ್ಕಾಕೊಳತ್ತೆ ಆಮೇಲೆ ನೀರು ಕುಡಿದ ಮೇಲೆ ಸರಿ ಆಯಿತು"
 
          ಅವನು ಅವಾಗ ನನ್ನ ನೋಡಿ ನನ್ನ ಬಳಿ ಓಡಿ ಬರ್ತಾನೆ ಎಲ್ಲರೂ ಸುಮ್ಮನೆ ಆಗ್ತಾರೆ ಏನೋ ಗರ ಬಡೆದು ಕೊಂಡೋರು ತರ, ಚಕ್ರಪಾಣಿ ಸಣ್ಣಗೆ ಆಗಲೇ ಆಳೋಕೆ ಶುರು ಮಾಡಿರ್ತಾನೆ, ನನಗೆ ಅರುಣ್ ನೋಡಿ ಬಹಳ ಕುಶಿ ಆಗಿರುತ್ತೆ ಇನ್ನು ಯಾವಾಗಲು ಇವನನ್ನ ಬೈಯೋಲ್ಲ ಇನ್ನು ಇವನು ನನ್ನ ಮಗನೆ ಅನ್ನೋ ನಿರ್ಧಾರ ನಾನು ಅಲ್ಲಿ ತಗೊಳ್ತೀನಿ, ಅವನು ಬಂದು ನನ್ನ ಗಟ್ಟಿ ಅಪ್ಪಿಕೊಳ್ಳುತಾನೆ ನಾನು ಅವನ ಹಣೆಗೆ ಒಂದು ಮುತ್ತನ ಇಡೋವಾಗ ನನ್ನ ಕಣ್ಣಲ್ಲಿ ನೀರು ಇರುತ್ತೆ. 

ಅರುಣ್: " ಮಾತಾಜಿ ಅದು chocolate ತಿಂದ ಮೇಲೆ ಹೊಟ್ಟೆ ಎಲ್ಲ ಒಂದು ತರಾ ಅಗ್ತಾ ಇತ್ತು ಅದುಕ್ಕೆ toiletಗೆ ಹೋಗಿದ್ದೆ ಇವರು ಬರ್ತಾ ನಿಮಗೆ ಸುಳ್ಳು ಹೇಳಿ ಕರ್ಕೊಂಡು ಬಂದಿದಾರೆ ಇಲ್ಲಿ ಹಳೆ ತರದ್ದು toilet ಇಲ್ಲ , ಇಲ್ಲಿ ಇರೋದು comod ಎ ಆದರೆ ಈ ಸರಿ ನಾನು FLUSH  ಮಾಡೋದು ಮರಿಲಿಲ್ಲ!!!"



                           
               
         

     






         


     

No comments:

Post a Comment