Monday 14 March 2016

ಕಾಂತಿ

ಕಾಂತಿ 




           " ಸರ್ ಎಲ್ಲಿಗೆ ಹೋಗ್ತಾ ಇರೋದು ನಾಳೆ ನೀವು ?"
           "ಧರ್ಮಸ್ಥಳ"
           "ಎಷ್ಟು ದಿನ?"
           "ನಾಲ್ಕು ದಿನ ಆಗುತ್ತೆ ಹಾಗೆ ೨ ದಿನ ನಮ್ಮ ಮನೆಯೋರ ಊರು ಕುಂದಾಪುರಕ್ಕೆ ಹೋಗಿ ಬರ್ತೀವಿ"
           "ಆದರು ಇವತ್ತು ತುಮಕೂರು ಹೋಗೊ ಅವಶ್ಯಕತೆ ಇರ್ಲಿಲ್ಲ ಆಲ್ವಾ ಸರ್?"
           "ಹೌದು ಆದರೆ ನನಗೆ ಇತ್ತೀಚೆಗೆ ತುಂಬಾ case ನೋಡಿ ಹಗಲು ರಾತ್ರಿ station ಅಲ್ಲಿ ಇದ್ದು ಸಾಕಾಗಿತ್ತು, ಸ್ವಲ್ಪ relief ಬೇಕಾಗಿತ್ತು "
          "ನೀವು ಆಗಿದಕ್ಕೆ ಮಾಡ್ತಾ ಇದ್ದೀರಾ ಸರ್, ಮುಂಚೆ ಇದ್ದ officer ಅವರಿಗೆ ಬೇಕಾದಾಗ ಬರೋರು ಬೇಡಾದಾಗ  ಹೋಗೋರು, ಎಲ್ಲ ಕೆಲಸ ನಾನು ನಾಗರಾಜು ಮಾಡಿ ಮಾಡಿ ಸಾಕಾಗಿತ್ತು "
          "ಅವರು ಇವಾಗಲು ಚಾಮರಾಜಪೇಟೆ ಅಲ್ಲಿ ಆರಾಮಾಗಿ ಇದ್ದಾರೆ, ಅದೇನೋ ಎಲ್ಲ ಕೇಸ್ ನನಗೆ ಬರುತ್ತೆ ಅನಿಸುತ್ತೆ"
          "ಸರ್ ಆದರು ಹೋದ ವಾರ ಮುಚ್ಚಿಹೊಯ್ತಲ್ಲ ಭರತ್ ಕುಮಾರ್ ಅವರ ಕೇಸ್ ಅದರ ಬಗ್ಗೆ ನೀವು ಮಾತಾಡೋಕೆ ಯಾಕೆ ಇಷ್ಟಪಡ್ತಿಲ್ಲ?"
          "ಇನ್ನು ಏನು ಹೇಳ್ಬೇಕು ಗೋವಿಂದಣ್ಣ , ಕೊಲೆ ಮಾಡಿದೋನು ಬದಕಿಲ್ಲ ಯಾಕೆ ಮಾಡಿದ ಅಂತ ಹೇಳದೆ ಸತ್ತಿ ಹೋದ ಬೇರೆ ಯಾವುದೇ lead ಇಲ್ಲ,ಅದು ಬೇರೆ ಕತ್ರಿಗುಪ್ಪೆ areaದಲ್ಲಿ  ಎರಡು ಮರ್ಡರ್ ಆಗಿವೆ ಅದರ ಬಗ್ಗೆ investigation ಮಾಡಬೇಕು ಅದುಕ್ಕೆ ACP ಸರ್ close ಮಾಡ್ಬಿಡಿ ಅಂತ ಹೇಳಿದರು "
          "ಸರ್ ಮತ್ತೆ ನೀವು ಹೋದ ವಾರ ಇಂದ ಯಾಕೆ ಒಂದು ತರ ಇದ್ದೀರಾ?" ಯಾಕೆ ಹೋದ ಶುಕ್ರವಾರ  ಸಂಜೆ ನೀವು station ಇಂದ ಹೊರಗೆ ಓಡಿ ಹೋಗಿ ಪುಟ್ಟಣ್ಣಗೆ ಗಾಡಿ ತೆಗಿಯೋಕೆ ಹೇಳಿ gate ಹತ್ತಿರ ನಿಂತು ಏನೋ ಮೇಲೆ ಆಕಾಶ  ನೋಡಿ ಮತ್ತೆ ಯಾಕೆ ವಾಪ್ಪಸ್ಸು ಬಂದಿದ್ದು  ? "
       "ಏನು ಇಲ್ಲ ಗೋವಿಂದು, ಏನು ಆಗಿಲ್ಲ ಅವತ್ತು?"
        "ಸರ್ ತಪ್ಪು ತಿಳಿ ಬೇಡಿ ನಾನು ಆ ಗೊಂಬೆ ಒಳಗೆ ಸಿಕ್ಕ ಪತ್ರದಲ್ಲಿ ಇದ್ದ ಪದ್ಯ ಓದಿದೆ,ನನಗೆ ಏನು ಅರ್ಥ ಆಗ್ಲಿಲ್ಲ, ಆದರೆ ಅದರಲ್ಲಿ ಏನೋ ವಿಷಯ ಇದೆ  ನಾನು ಹೋದ ವಾರ ೩ ದಿನ ಊರಿಗೆ ಹೋಗಿದ್ದೆ ರಜೆ ಹಾಕಿ ಅದಕ್ಕಾಗಿ ನನಗೆ ಪೂರ್ತಿ ವಿಷಯ ಗೊತ್ತಿಲ್ಲ, ಸರಿಯಾಗಿ ಏನಾಗಿದೆ ಅಂತ ಈ ಕೇಸ್ ಅಲ್ಲಿ  ನಿಮ್ಮ ಜೊತೆ  ಇದ್ದ  ನಾಗರಾಜುಗು ಗೊತ್ತಿಲ್ಲ, ನೀವು ನನ್ನ ಹತ್ತಿರ ಏನು ಯಾವತ್ತು  ಮುಚಿಟ್ಟಿಲ್ಲ  ನಿಮಗೆ ಹೇಳ್ಬೇಕು ಅನಸಿದರೆ ಹೇಳಿ, ಇನ್ನು ಬಲವಂತ ಮಾಡೋಲ್ಲ"

"ಗೋವಿಂದಣ್ಣ ನೀವು head constable ಆಗಿ ೨೫ ವರ್ಷ ಇಂದ ಇದ್ದೀರಾ ಎಷ್ಟೋ ಕೇಸ್ ನೋಡಿರ್ತಿರಾ ನಾನು S.I ಆಗಿ ಇನ್ನು ೪ ವರ್ಷ ಆಗಿದೆ ಅಷ್ಟೇ ಅದುಕ್ಕೆ ಸ್ವಲ್ಪ disturb ಆಗಿರೋದು"

"ಯಾವತ್ತು ಆಗಿದ್ದು ?"

             
                  ಮಾರ್ಚ್ ೧೨ ಸುಮಾರು ರಾತ್ರಿ ಹತ್ತು ಗಂಟೆಗೆ, ಮನೆಯಲ್ಲಿ ಊಟ ಮಾಡ್ತಾ ಇದ್ದೆ ಸಾಂಬಾರ್ ಅಲ್ಲಿ ಉಪ್ಪು ಜಾಸ್ತಿ ಆಗಿತ್ತು ಅದುಕ್ಕೆ ಅನಸುಯಗೆ ಬೈತಾ ಇದ್ದೆ ಅವಾಗ ಫೋನ್ ಬಂತು, ಬನಶಂಕರಿ 3rd stage ಹತ್ತಿರ ಮನೆ ನಾನು ನಾಗರಾಜು spotಗೆ ತಕ್ಷಣ ಹೋದ್ವಿ ಅವರನ್ನ ಆಸ್ಪತ್ರೆ ಕರ್ಕೊಂಡು ಹೋಗಿದ್ರು ಪ್ರಾಣ ಸುಮಾರು 9ಗೆ ಹೋಗಿತ್ತು ಮನೆಯಲ್ಲಿ ಯಾರು ಇರಲಿಲ್ಲ ಅವರ  ಹೆಂಡತಿ ಮಗ ಹೊರಗಡೆ ಹೋಗಿದ್ದರು, ಕೊಲೆ ಆಗಿ ಹತ್ತು ನಿಮಿಷದಲ್ಲಿ ಪಕ್ಕದ ಮನೆಯೋರು ಅವರ ಮಗಂಗೆ ಫೋನ್ ಮಾಡ್ತಾರೆ ಆದರೆ ಬಂದು ಆಸ್ಪತ್ರೆ ತಗೊಂಡು ಹೋಗೋ  ಅಷ್ಟರಲ್ಲಿ he is no more, ಭರತ್ ಕುಮಾರ್ ಅವರು ಸೋಫಾ ಮೇಲೆ ಕೂತು T.V ಕಡೆ ತಲೆ ಮಾಡಿ ಕೂತಿದಾರೆ ಅವಾಗ ಹಿಂದಿಂದ ಯಾರೋ ಬಂದು ಕುತ್ತಿಗೆಗೆ ಕತ್ತಿ ಹಾಕಿದಾರೆ, ಕೊಗೂಕೆ ಆಗದೆ ಚೀರೋಕೆ ಆಗದೆ ಅಲ್ಲೇ ಕುಸಿದು ಬಿದ್ದು ಪ್ರಾಣ ಬಿಟ್ಟಿದಾರೆ

ಗೋವಿಂದಣ್ಣ: "ಮತ್ತೆ ಪಕ್ಕದ ಮನೆಯೋರಿಗೆ ಹೇಗೆ ಗೊತ್ತಾಗಿದ್ದು?"

             ಅವರ ಸ್ಟೂಡೆಂಟ್ ಗಿರಿಧರ, ಅವನು ಅವತ್ತು ಅವರ ಮನೆಗೆ ಸುಮಾರು 9 ಗಂಟೆಗೆ, ಭರತ್ ಕುಮಾರ್ ಅವರೇ ಅವನಿಗೆ ಮನೆಗೆ ಬರೋಕೆ ಹೇಳಿದ್ದರು ಅದುಕ್ಕೆ ಅವನು ಹೋಗಿದ್ದ ಅವನಿಂದ ಪಕ್ಕದ ಮನೆಯೋರಿಗೆ ಗೊತ್ತಾಗಿ ಅವರು  ಮಗನಿಗೆ ಫೋನ್ ಮಾಡಿದ್ದು, postmortem ರಿಪೋರ್ಟ್ ಎರಡು ದಿನ ಆದಮೇಲೆ ಬಂತು ಅದರ ಪ್ರಕಾರ ಅವರು ಸುಮಾರು 8:50ಗೆ ಪ್ರಾಣ ಬಿಟ್ಟಿದರು, ಸಾಕ್ಷಿ ಇದ್ದಿದು ಒಬ್ಬನೇ ಅವರ ಸ್ಟೂಡೆಂಟ್ ಆದರೆ....

ಗೋವಿಂದಣ್ಣ:"ಆದರೆ... ಏನ್ ತೊಂದರೆ ಇತ್ತು ಸರ್?"

              ಅವನು ಹುಟ್ಟು ಕುರುಡ, ಭರತ್ ಕುಮಾರ್ ಅವರು ಪ್ರಿನ್ಸಿಪಾಲ್ ಆಗಿದ್ದ  S.J.C ಕಾಲೇಜ್  ಅಲ್ಲಿ ಓದ್ತಾ ಇದ್ದ, ಮನೆಯೋರು, ಫ್ರೆಂಡ್ಸ್ ಎಲ್ಲರನ್ನು ವಿಚಾರಿಸಿ ಆಗಿತ್ತು ಯಾವುದೇ ಸುಳಿವು ಸಿಕ್ಕಿರಲಿಲ್ಲ ಯಾವುದೇ finger prints ಇಲ್ಲ, ಕೊನೆಗೆ ಏನು ಮಾಡದೇ ಗೊತ್ತಾಗದೆ ಅವರ ಫೋನ್ call list ಅಲ್ಲಿ ಇದ್ದ ಎಲ್ಲರನ್ನು ವಿಚಾರಿಸೋಕೆ ಶುರು ಮಾಡಿದ್ವಿ, ಅವಾಗ ಗಿರಿ ಸ್ವತಃ ತಾನೆ ಸ್ಟೇಷನ್ ಗೆ ಬಂದ.

ಗೋವಿಂದಣ್ಣ:"ಅಲ್ಲಿ ತನಕ ಅವನನ್ನ ನೀವು ವಿಚಾರಿಸಲಿಲ್ವಾ?"
 
              ಅವನು ೨ ದಿನ  ಚೆನ್ನೈ ಗೆ ತೆರಳಿದ್ದ ನಂತರ ಅವನು ಅಲ್ಲಿಂದ ಬಂದ ದಿನಾನೆ ಅವನು ಸ್ಟೇಷನ್ ಗೆ ಬಂದ, ಅವನ ಪ್ರಕಾರ ಅವನು ರಾತ್ರಿ ೯ ಗೆ ಅಲ್ಲಿಗೆ ಹೋದಾಗ, tv ಶಬ್ದ ಜೋರಾಗಿ ಬರ್ತಾ ಇರುತ್ತೆ ಒಳಗಡೆಯಿಂದ ಯಾರೋ ನಗ್ತಾ ಇರೋದು ಕೇಳಿಸುತ್ತೆ ಇವನು ಗೇಟ್ ಯಿಂದ ಸ್ವಲ್ಪ ಮುಂದೆ ಬರೊ ಅಷ್ಟರಲ್ಲಿ  ಯಾರೋ ಇವನನ್ನ ದೂಡಿ  ಓಡಿ  ಹೋಗ್ತಾರೆ ಅವನು ಕೆಳಗೆ ಬಿದ್ದಿದಕ್ಕೆ ತಲೆಗೆ ಏಟು ಬಿದ್ದು  "ಅಮ್ಮಾ !!!" ಅಂತ ಚೀರಿದ್ದು ಪಕ್ಕದ ಮನೆಯೋರಿಗೆ ಕೇಳಿಸುತ್ತೆ....

     ಗೋವಿಂದಣ್ಣ:"ಇದರಿಂದ ನಿಮಗೆ ಏನು lead ಸಿಗುತ್ತೆ?"
         
           ನಾವು ಮನೆಯೊರನ್ನ ವಿಚಾರಿಸಿದಾಗ ಅವರ ಪ್ರಕಾರ ಅವರಿಗೆ ಯಾರು ಶತ್ರು ಆಗಲಿ ಅಥವಾ ಯಾರಿಂದ ಆದರು threat ಆಗಲಿ ಇರಲಿಲ್ಲ, ಆದರೆ ಗಿರಿ ಹೇಳಿದ್ದು "ಸರ್ ನಾನು ತುಂಬಾ ಸರಿ ಕೇಳಿದೀನಿ ಅವರು tension , ಸಿಟ್ಟಿನಿಂದ ಫೋನ್ ಅಲ್ಲಿ ಮಾತಾಡೋದು ನನಗೆ ಅನಿಸುತ್ತೆ ಅವರಿಗೆ ಶತ್ರುಗಳು ಇದ್ದರು ಯಾರು ಅನ್ನೋದು ಗೊತ್ತಿಲ್ಲ, ಮತ್ತೆ ಇನ್ನೊಂದು ವಿಷಯ ಏನಂದರೆ ನಾನು ಅವತ್ತು ಜೋರಾಗಿ ಕೇಳಿದ್ದ ಆ ನಗು ಮುಂಚೆ ಎಲ್ಲೊ ಕೇಳಿದ್ದೆ ಯಾವಾಗ ಅನ್ನೋದು ನೆನಪಿಗೆ ಬರ್ತಾ ಇರಲಿಲ್ಲ, ಸ್ವಲ್ಪ ಹೊತ್ತಿಗೆ ಮುಂಚೆ ಗೊತ್ತಾಗಿದ್ದು ಅದು ನಾನು ಒಂದು ಸರಿ ಪ್ರಿನ್ಸಿಪಾಲ ಚೇಂಬರ್ ಒಳಗೆ ಹೋದಾಗ ಅವರು ಫೋನ್ ಅಲ್ಲಿ ಒಬ್ಬರ ಜೊತೆ ಮಾತಾಡ್ತಾ ಇದ್ದರು ಆ ಫೋನ್ ಅಲ್ಲಿ ನಾನು ಕೇಳಿದ್ದೆ ಆ ನಗು ಜೋರಾಗಿ ಮೈಮರೆತು ಇಡಿ ಊರಿಗೆ ಕೇಳಿಸೋ ಹಾಗೆ ಇತ್ತು  ಅಷ್ಟೇ ಅಲ್ಲ  ಮೂರು ನಾಲ್ಕು ಸರಿ ಕೇಳಿದೀನಿ.... "

 

            ಈ ಆದಾರ ಇಟ್ಟಿಕೊಂಡು ನಾವು  ಭರತ್ ಕುಮಾರ್ call list ಅಲ್ಲಿ ಇರೋ numbersನ ವಿಚಾರಿಸೋಕೆ ಶುರು ಮಾಡಿದಿವಿ. ನಾನು ಒಂದು ಪುಸ್ತಕದಲ್ಲಿ ಓದಿದ್ದೆ, ಕೊಲೆ ಆಗಿರೋ ವ್ಯಕ್ತಿಗೆ ಯಾರು ಶತ್ರು ಇಲ್ಲ ಅಂದರೆ, ಯಾವುದೇ ಸುಳಿವು ನಮಗೆ ಸಿಕ್ಕಿಲ್ಲ ಅಂದರೆ ಕೊಲೆಗಾರ ಯಾರೋ ಹತ್ತಿರದ ವ್ಯಕ್ತಿ ಆಗಿರೋ ಸಂಭವ ಜಾಸ್ತಿ ಇರುತ್ತೆ, ಸದ್ಯಕ್ಕೆ ನಮ್ಮ ಅನುಮಾನ ಎಲ್ಲ ಭಾರ್ಗವ್ ನಾರಾಯಣ್ ಮೇಲೆ ಇತ್ತು ಅವರು ಅದೆ ಕಾಲೇಜ್ ಅಲ್ಲಿ senior proffesor ಆಗಿದ್ದರು, ಅವರು ನಮ್ಮ ಯಾವ ಫೋನ್ recieve ಮಾಡ್ತಾ ಇಲ್ಲ,  ಎಲ್ಲಿ ಇದರೊ ಯಾರಿಗೂ ಗೊತ್ತಿಲ್ಲ, ಭರತ್ ಕುಮಾರ್ call list ಅಲ್ಲಿ ಅವರ ಹೆಸರು ತುಂಬಾ ಸರಿ ಇತ್ತು , ಆದರೆ ಕೊಲೆ ಆದ ದಿನದಿಂದ ಮನೆಗೆ ಬಂದಿಲ್ಲ ಮನೆಯೋರು ಅವರನ್ನ ಹುಡುಕುತ ಇದಾರೆ ನಮ್ಮ ಪ್ರಶ್ನೆಗೆ ಉತ್ತರ ಅವರೇ ಕೊಡೋಕೆ ಸಾಧ್ಯ.
     
        ಕಾಲೇಜ್ ಗೆ ಹೋದಾಗ ಗುಮಾಸ್ತ ಚನ್ನಪ್ಪ ಹೇಳಿದ್ದು  "ಗಿರಿ ಭರತ್ ಸರ್ ನ ನೋಡೋಕೆ ತುಂಬಾ ಸರಿ ಬರ್ತಾ ಇದ್ದ, ಅವನಿಗೆ ಅಮೇರಿಕಾ ಹೋಗೋಕೆ ಅದೇನೋ scholarship ಸಿಕ್ಕಿತ್ತು ಅದುಕ್ಕೆ ಅವರ ಹತ್ತಿರ ತುಂಬಾ ಸರಿ ಬರ್ತಾ ಇದ್ದ, ನಾನು ಅವತ್ತು ಕದ್ದಿ ಕೇಳಿಸಿ ಕೊಂಡಿದ್ದೆ  ೯ಕ್ಕೆ ಅವರು ಅವನನ್ನ ಕರದಿದ್ದು ದುಡ್ಡು ಇಸ್ಕೊಳೋಕೆ ನನಗೆ ಗೊತ್ತಿರೋ ಪ್ರಕಾರ ಅವನ ಹತ್ತಿರ ಅವರು ಏನಿಲ್ಲ ಅಂದರು ಒಂದು ಲಕ್ಷ ಲಂಚ ಕೇಳಿದ್ದರು"    

                 ತಕ್ಷಣ ಅವನ ಮನೆಗೆ ಹೊರಟ್ವಿ, ಅವನು ಮನೆ ಆಚೆ ಸಣ್ಣ ಮಕ್ಕಳ ಜೊತೆ ಆಡುತ ಇದ್ದ, ಆ ಮುಗ್ಧತೆ, ಸರಳತೆ ಇವನ ಹತ್ತಿರ ದುಡ್ಡು ಕೇಳೋಕೆ ಆ ಪ್ರಿನ್ಸಿಪಾಲ್ಗೆ ಹೇಗೆ ಮನಸ್ಸು ಆಯಿತೋ ಅನಿಸಿತು. ನನಗೆ ಅನುಮಾನ ಬಂದು ಅವನ ಮೇಲೆ ಕೇಸ್ ಹಾಕಿ ಕ್ಲೋಸ್ ಮಾಡೋ ಪರಿಕಲ್ಪನೆಯಲ್ಲಿ ತೆರಳಿದ್ದೆ ಆದರೆ ಆ ವಾತಾವರಣ ನನ್ನ ತಡಿತು.

      "ನೀನು ಯಾಕೆ ಅವತ್ತು ಅವರ ಮನೆಗೆ ಹೋಗಿದ್ದೆ ಗಿರಿ?"

 "ನೀವು collegeಗೆ ಹೋಗಿದ್ದರಿ ಅನಿಸುತ್ತೆ ನಿಮ್ಮ ಪ್ರಶ್ನೆಯಲ್ಲಿ ದೊಡ್ಡ ಪ್ರಶ್ನಾರ್ಥಕ ಚಿನ್ಹೆ ಇದೆ, ಸರ್ ನೀವು ಕೇಳಿದ್ದು ನಿಜಾನೆ ನಾನು ಅವತ್ತು ಅವರಿಗೆ ಒಂದು ಲಕ್ಷ ಲಂಚ ಕೊಡೋಕೆ ಹೋಗಿದ್ದೆ, ಸರ್ EMPH  ಅಂತ new jersey ಅಲ್ಲಿ ಬಹಳ ದೊಡ್ಡ academy ಅವರು ಪ್ರತಿ ಸರಿ ಭಾರತ ಇಂದ ೨೦ ಜನ ಅಂಗವಿಕಲರನ್ನ select ಮಾಡಿ ಅವರಿಗೆ scholarship ಕೊಟ್ಟು,  ಅವರ institution ಅಲ್ಲಿ training ಕೊಟ್ಟು  ನಮಗೆ ದೊಡ್ಡ oppurtunities ಅನ್ನು ಕಲ್ಪಿಸಿ ಕೊಡ್ತಾರೆ, ಎಷ್ಟೋ ಲಕ್ಷ ಜನದಲ್ಲಿ select ಆದ ೨೦ರಲ್ಲಿ ನಾನು ಒಬ್ಬ, ನಾನು english literature and creative writingಗೆ select ಆಗಿದ್ದು ಆದರೆ ಕಾಲೇಜ್ ಇಂದ degree completion letter ಬೇಕು , ಅದು ಅಷ್ಟು ಬೇಗ ಸಿಗೋಲ್ಲ ಬೇಗ ಬೇಕು ಅಂದರೆ ದುಡ್ಡು ಕೊಡಬೇಕು , principal ಸರ್ ಗೆ ದುಡ್ಡಿನ ಮೇಲೆ ಬಹಳ ಹಂಬಲ ಇತ್ತು ಅವರು ಎಲ್ಲ ಮಕ್ಕಳ ಹತ್ತಿರ ದುಡ್ಡು ಕೀಳ್ತಾ ಇದ್ದರು,  ಅವರು  ನನ್ನ ವಿಷಯ ದಲ್ಲಿ ಕರುಣೆ ತೋರಿಸ್ತಾರೆ ಅಂದುಕೊಂಡಿದ್ದೆ ಆದರೆ ಅವರು ನನ್ನ ಮೇಲೆ ಸ್ವಲ್ಪ ಜಾಸ್ತಿನೆ ತೋರಿಸಿದರು , ನನಗೆ ಎಲ್ಲ ನನ್ನ ಅಕ್ಕನೆ ತಂದೆ ತಾಯಿ ಯಾರು ಇಲ್ಲ , ಅಲ್ಲಿ ಒಂದು ವರ್ಷ ಇದ್ದು ಇಲ್ಲಿ ಯಾವುದಾದರು ಒಳ್ಳೆ ಕೆಲಸಕ್ಕೆ ಸೇರಿ, ಅಕ್ಕಂಗೆ ಒಳ್ಳೆ ಗಂಡು ನೋಡಿ ಮದುವೆ ಮಾಡಿಸೋ ಆಸೆ, ಅವಳು garments ಫ್ಯಾಕ್ಟರಿ ಅಲ್ಲಿ ಕೆಲಸ ಮಾಡ್ತಾಳೆ ಅದುಕ್ಕೆ ಸಾಲ ಮಾಡಿ ಅವರಿಗೆ ದುಡ್ಡು ಕೊಡಲು ಹೋಗಿದ್ದೆ ಅವತ್ತು, ಇವಾಗ ಅವರು ಇಲ್ಲ ನನಗೆ ಕಾಲೇಜ್ ಇಂದ  letter  ಸಿಗತ್ತೋ ಇಲ್ಲವೋ ಗೊತ್ತಿಲ್ಲ"

   "ಗಿರಿ ನೀನು ಒಂದು ಕೆಲಸ ಮಾಡು ನಾಳೆ ಹೋಗಿ ನಿಮ್ಮ vice ಪ್ರಿನ್ಸಿಪಾಲ ಅವರನ್ನ ನೋಡು, ನಾನು ಅವರಿಗೆ ಎಲ್ಲ ಹೇಳಿ ನಿನ್ನ ಕಾಲೇಜ್ ಯಿಂದ ಲೆಟರ್ ಕೊಡೋಕೆ ಅವರಿಗೆ ಹೇಳಿರ್ತೀನಿ, ಏನು ಚಿಂತೆ ಮಾಡಬೇಡ"

 "ತುಂಬಾ thanks ಸರ್  ನನ್ನ ನಂಬಿದಕ್ಕೆ, ನಾವು ಎಲ್ಲರ ಥರ ಇರೋಕೆ ಇಷ್ಟ ಪಡ್ತೀವಿ ಎಲ್ಲರ ತರ  ಕನುಸು ಕಾಣುತೀವಿ ಅದುನ್ನ ಪೋಷಿಸೋರುಗಿಂತ ನೀರು ಯೆರಚೋರೆ ಜಾಸ್ತಿ ನಿಮ್ಮ ಉಪಕಾರ ಯಾವತ್ತು ಮರೆಯೋಲ್ಲ "

"ಏನು ಪದ್ಯ , ಕಥೆ ಎಲ್ಲ ಬರೀತಿಯಾ?"

"ಅಷ್ಟೇ ಅಲ್ಲ ಸರ್ articles, journels, scripts ಕೂಡ ಬರೀತೀನಿ , ನಾನು ಬರೆದ ಒಂದು ಪದ್ಯ ಅವರಿಗೆ ತುಂಬಾ ಇಷ್ಟ ಆಗಿತ್ತು.... "

"ಯಾವುದದು ತೋರಿಸು ನೋಡೋಣ "

A bird lay it's eggs on the nest try to keep it 
safe and free 
Those eggs turns out be a tasty food for the snake 
Which lies beside the tree 
Seeing only the empty nest a bird will be in Vain 
It shatters it wings, shakes it head but can't express the pain 

A snake lives in a small caves of rock 
with all its small one 
An eagle searching for the food picks 
the child when there is no one 
A Snake coming after search of food finds none of its child 
It sees up the sky 
It looks around, Up and down, it crawl faster as long it can 
But to find it's child it can't fly 

A mother knows pain of delivery 
A father knows pain of getting right salary 
A greedy knows pain of hungry 
A rich knows pain in pressure and getting angry 

Being a human with all super sense we can express our pain 
Which can give some nourishment 
But pain is a pain for all creatures express it or not 
To a heart its always punishment.........


"ಚೆನಾಗಿದೆ, ಬಹಳ ಚೆನಾಗಿದೆ, ಕನ್ನಡದಲ್ಲಿ ಬರೆಯೋಲ್ವ?"

"ಬರೀತೀನಿ ಆದರೆ ಕಡಿಮೆ"

"ಸರಿ ಗಿರಿ ಬರ್ತೀನಿ, ಮತ್ತೆ ಏನಾದರೂ ತೊಂದರೆ ಆದರೆ ನನಗೆ ತಿಳಿಸು"

ಗೋವಿಂದಣ್ಣ:"ನೀವು ಬಿಡಿ ಸರ್ ದೊಡ್ಡ ಮನಸು ನಿಮ್ಮದು ಯಾರದ್ರು ಕಷ್ಟದಲ್ಲಿ ಇದ್ದರೆ ಏನಾದರೂ ಸಹಾಯ ಮಾಡದೇ ಸುಮ್ಮನೆ ಇರೋಲ್ಲ . ಮತ್ತೆ ಆ ಭಾರ್ಗವ್ ನಾರಾಯಣ್ ಅವರು ಸಿಕ್ಕಿದರ"

"ಹೊಂ ಸಿಕ್ಕಿದರು ಆದರೆ ಹೆಣವಾಗಿ"

ಗೋವಿಂದಣ್ಣ:"ಏನು!!! ಕೊಲೆ ಆದರಾ?"
   
             ಚಿಕ್ಕಮಗಳೂರು  ಹತ್ತಿರ ದೇವರಮನೆ ಅನ್ನೋ ಊರು ಹತ್ತಿರ ಅವರ ಹೆಣ ಸಿಕ್ಕಿತು, ಎಲ್ಲ investigation reports ಪ್ರಕಾರ ಅವರಿಗೆ ತಗಲಿದ್ದ ಗುಂಡು ನಾಲ್ಕು ವರ್ಷ ಹಿಂದೆ ನಡೆದ ಒಂದು ಕೊಲೆಯಲ್ಲಿ fire ಆದ ಗುಂಡಿಗು match ಆಗ್ತಾ ಇತ್ತು, ಆ ಕೇಸ್ ಶಮಿ ಭೈಯ್ ಗೆ ಸಂಭಂದ ಪಟ್ಟಿದು ಆಗಿತ್ತು, ನಂತರ furher investigation ಮಾಡಿದಮೇಲೆ ಅವರ ಗ್ಯಾಂಗ್ ನ ಒಬ್ಬ ಸಹಚರನ ಪ್ರಕಾರ, ಭಾರ್ಗವ್ ನಾರಾಯಣ್ ಶಮಿ ಭಾಯಿ ಗೋಸ್ಕರ drugs deal ಅಲ್ಲಿ ಕೆಲಸ ಮಾಡ್ತಾ ಇದ್ದರು.  ಯಾರೋ ಶಮಿ ಭೈಯ್ ಗೆ unknown ಕಾಲ್ ಮಾಡಿ  ಭಾರ್ಗವ್ ಅವರು ಪೋಲಿಸ್ ಗೆ ಎಲ್ಲ ವಿಷಯ leak ಮಾಡಿದಾರೆ ಅಂತ ಹೇಳ್ತಾರೆ ಜೊತೆಗೆ  ಸಂಬಂಧ ಪಟ್ಟ ಫೋಟೋ ಕೂಡ mail ಮಾಡಿದಾರೆ, ಅದುಕ್ಕೆ ಭಾರ್ಗವ್ ಅವರು ತಲೆ ಮರಿಸಿಕೊಂಡಿದ್ದು, ಆದರು ಹುಡುಕಿ ಅವರನ್ನ ಕೊಂದಿದ್ದಾರೆ .

 ಗೋವಿಂದಣ್ಣ:"ಅಂದರೆ ಭರತ್ ಅವರನ್ನ ಕೊಲೆ ಮಾಡಿದ್ದೂ ಶಮಿ ಭೈಯ್ ನ?"

        ಮೊದಲಿಗೆ ನಾವು ಹಾಗೆ ಅಂದುಕೊಂಡಿದ್ದವಿ  ಆದರೆ ಆಮೇಲೆ ಕಚಿತವಾಗಿ ಗೊತ್ತಾಗಿದ್ದು ಶಮಿಗೆ ಈ ವಿಷ್ಯ  ಮಾರ್ಚ್ ೧೪ಕ್ಕೆ ಗೊತ್ತಾಗುತ್ತೆ, ಆದರೆ ಈ ಕೊಲೆ ಆಗಿದ್ದು ೧೨ಕ್ಕೆ ಮತ್ತೆ ನಮ್ಮ ಒಬ್ಬ informer ಪ್ರಕಾರ, ಶಮಿ ಕಡೆಯೋರು ಯಾರು ಅವತ್ತು ಅಂದರೆ ೧೨ನೆ ತಾರೀಕು ಬೆಂಗಳೂರು ಅಲ್ಲಿ ಇರಲಿಲ್ಲ ಎಲ್ಲರೂ ಮುಂಬೈ ಗೆ ಯಾವದೋ ಕೆಲಸದ ಮೇಲೆ ಹೋಗಿದ್ದರು, ನಾವು ಗಿರಿ ಹೇಳಿದನ್ನ ಪರಿಗಣಿಸಿ ಭಾರ್ಗವ್ ಅವರ ಮನೆಯಿಂದ ಅವರು ಇದ್ದ ಕೆಲುವು function cd ಗಳನ್ನ ತರಿಸಿ ಅವರ ನಗುವನ್ನು ರೆಕಾರ್ಡ್ ಮಾಡಿ ಗಿರಿಗೆ  ಕೇಳಿಸಿದರೆ ನನ್ನ ಅನುಮಾನ ನಿಜ ಆಗುತ್ತೆ, ಅವನು ಅವತ್ತು ಅದೆ ನಗು ಕೇಳಿರ್ತಾನೆ

ಗೋವಿಂದಣ್ಣ:"ಅಂದರೆ ನೀವು ಬರಿ ಆ ಗಿರಿ ಹೇಳಿದ್ದು ಕೇಳಿ ಭಾರ್ಗವ್ ಅವರೆ ಕೊಲೆಗಾರ ಅಂತ decide ಮಾಡಿದರಾ .. ಸರ್ ಯಾರು ಕೊಲೆ ಮಾಡಿ ನಗ್ತಾರೆ? ಯಾಕೆ  ಭಾರ್ಗವ್ ಅವರು ಕೊಲೆ ಮಾಡಿದ್ದರು?"
 
"ನನಗು ಅದೆ ಪ್ರಶ್ನೆ ತಲೆಯಲ್ಲಿ  ಓಡ್ತಾ ಇತ್ತು, ನಾನು ಇದರ ಬಗ್ಗೆನೆ ಯೋಚನೆ ಮಾಡ್ತಾ ಬೇರೆ ಕೇಸ್ ಮೇಲೆ ಗಮನ ಸರಿಯಾಗಿ ವಹಿಸೋಕೆ ಆಗದೆ ೧೫ ದಿನ ಕಳೆದೆ"

ಗೋವಿಂದಣ್ಣ:"ಅದುಕ್ಕೆನಾ ನೀವು ಒಂದು ತರ ಇರೋದು ಹೋದ ವಾರ ಇಂದ?"

"ಹೋದ ಶುಕ್ರವಾರ ಇಂದ ಸರಿಯಾಗಿ ಹೇಳ ಬೇಕಾದರೆ"

ಗೋವಿಂದಣ್ಣ:"ಯಾಕೆ ಸರ್ ಏನು ಆಯ್ತು?"

                                   ಅವತ್ತು ಸುಮಾರು ಸಂಜೆ ೪ ಗಂಟೆಗೆ  ಗಿರಿ station ಗೆ ಬರ್ತಾನೆ, ಅವನು ಅವತ್ತು ಅಮೆರಿಕಾಗೆ ಹೊರಡೋಗಿಂತ ಮುಂಚೆ ನನ್ನ ಒಂದು ಸರಿ ನೋಡಿ ಹೋಗೋಕೆ.

ಗೋವಿಂದಣ್ಣ:"ಹೌದು ನನಗೆ ಗೊತ್ತು ನಾನು ಇದ್ದನಲ್ಲ"

        ಅವನನ್ನ ನೋಡಿ ಕುಷಿ ಆಗುತ್ತೆ ಜೊತೆಗೆ ಅವರ ಅಕ್ಕ ಕೂಡ ಬಂದಿರ್ತಾಳೆ, ಕೊನೆಗು ಅವನು ಗುರಿ ಮುಟ್ಟೋಕೆ ಎಲ್ಲ ತಯಾರಾಗಿರ್ತಾನೆ.

 "ಸರ್  ನಿಮ್ಮಿಂದ ನನಗೆ ಕೊನೆಗೂ  ಬೆಳಕನ್ನ ನೋಡೋ ಅವಕಾಶ ಸಿಕ್ಕಿದೆ, ನಿಮಗೆ ಎಷ್ಟು thanks ಹೇಳಿದರು ಸಾಲದು ಅದುಕ್ಕೆ ನನ್ನಿಂದ ನಿಮಗೆ ಪುಟ್ಟ ನೆನೆಪಿನ ಕಾಣಿಕೆ, ಈ ಗೊಂಬೆ ನನ್ನ ತುಂಬಾ ಒಳ್ಳೆ ಸ್ನೇಹಿತ ಇದು ನನಗೆ ಬಹಳ ಸಹಾಯ ಮಾಡಿದೆ, ಇದು ಹೇಗೆ ಕಾಣುತ್ತೆ ನನಗೆ ಗೊತ್ತಿಲ್ಲ ಅದುಕ್ಕೆ ಏನೆ ನೋವು ಇರಲಿ,ಏನೆ ಕಷ್ಟ ಇರಲಿ ಇದನ್ನ ಕಿವಿ ಹತ್ತಿರ ತಂದು ಒಂದು ಸರಿ ಅಲ್ಲಾಡಿಸಿದರೆ ಅದರ ಶಬ್ದ ಮನಸಿನ ಎಲ್ಲ ಭಾರ ಇಳಿಸುತಿತ್ತು , ಇದರಿಂದ ಎಲ್ಲ ಪ್ರಶ್ನೆಗು ಉತ್ತರಾನು ಸಿಗುತ್ತೆ."

"ತುಂಬಾ ಥ್ಯಾಂಕ್ಸ್ and  all  the best for your future"

              
    ಗೋವಿಂದಣ್ಣ:"ಅವನು ೫ ಗಂಟೆ ಸುಮಾರು ಹೊರಟು ಹೋದ ಆಲ್ವಾ, ಎಂಟು ಗಂಟೆಗೆ flight ಇದೆ ಅಂತ ಹೇಳ್ತಾ ಇದ್ದ "

        ಹೌದು ನಾನು ನನ್ನ ಪಾಡಿಗೆ reports study ಮಾಡ್ತಾ ಇದ್ದೆ, ಅವಾಗ ಅವನು  ಕೊಟ್ಟ ಗೊಂಬೆ ಮೇಲೆ ಗಮನ ಹೋಯ್ತು ಅವನು ಹೇಳಿದ್ದು ನೆನಪಿತ್ತು ಕೀವಿ ಹತ್ತಿರ ಇಟ್ಟು ಅಲ್ಲಾಡಿಸಿದೆ ಒಳಗಡೆ ಏನೋ ಇತ್ತು ಅದರ ಶಬ್ದ ಅಷ್ಟೆ, ತಕ್ಷಣ ನನಗೆ ಏನೋ ಹೊಳಿತು ಅವನು ಹೇಳಿದ್ದು "ಎಲ್ಲ ಪ್ರಶ್ನೆಗೂ ಉತ್ತರ ಸಿಗುತ್ತೆ", ಆ ಗೊಂಬೆ normal rubber plasticದು  ಆಗಿತ್ತು  ಅದರ ಕೆಳಗೆ ರಂದರ ಇತ್ತು ಬೇಕಂತ ಮಾಡಿ ಒಳಗೆ ಏನೋ ಇಟ್ಟ ಹಾಗೆ, ಗೊಂಬೆ ಪೂರ್ತಿ ಹರಿದು ಒಳಗೆ ನೋಡಿದರೆ ಎರಡು ಕಾಗದ ಇತ್ತು ಒಂದು ಕಾಗದ ಮೇಲೆ ಒಂದು, ಇನ್ನೊಂದರ ಮೇಲೆ ಎರಡು ಅಂತ ಬರದಿತ್ತು.       
  
                                                               ಒಂದು
"ಸರ್ ಸತ್ಯ ಬರಿ ಕಹಿ ಅಷ್ಟೆ ಅಲ್ಲ ಅದು ಬೆಂಕಿ ಇದ್ದ ಹಾಗೆ, ಒಂದು ಮನೆಯನ್ನು ಕೂಡ ಸುಟ್ಟು ಬಿಡಬೋಹುದು, ನಿಮಗೆ ಆದರು ನಾನು ಒಂದು ಸತ್ಯ ಹೇಳಲೇ ಬೇಕು ಅವತ್ತು ರಾತ್ರಿ  ಭರತ್ ಕುಮಾರ್ ಅವರು ಕರದಿದ್ದು ನನ್ನ ಅಲ್ಲ ಸರ್ ನನ್ನ ಅಕ್ಕನನ್ನ ಅವರು ಕೇಳಿದ್ದು ೨ ಲಕ್ಷ ಅದುಕ್ಕೆ ನಮ್ಮ ಅಕ್ಕ ಅವರನ್ನ ಕೇಳೋಕೆ ಅಂತ ಕಾಲೇಜ್ ಗೆ ಬಂದಿದ್ದಳು, ಹೇಗಾದರೂ ಮಾಡಿ ಒಂದು ಲಕ್ಷ ಹೊಂದಿಸಿ ಕೊಡ್ತೀವಿ ದಯವಿಟ್ಟು permission  ಕೊಡಿ ಅಂತ ಕೇಳಿದಳು, ಅದುಕ್ಕೆ ಅವರು ಸರಿ ಒಂದು ಲಕ್ಷ ಕೊಡು ಆ ಒಂದು ಲಕ್ಷ ತಗೊಂಡು ನಮ್ಮ ಮನೆಗೆ ನೀನೆ ಬಾ, ಒಂದು ರಾತ್ರಿ ಇರು ಅಂತ ಕೇಳಿದರು ತಮ್ಮನಿಗಿಂತ ತನ್ನ ಶೀಲ ಮುಖ್ಯ ಅಲ್ಲ ಅಂತ ನಮ್ಮ ಅಕ್ಕ ಒಪ್ಕೊಂಡಳು. ಆದರೆ ಈ ವಿಷಯ ನನಗೆ ಗೊತ್ತಾಗಿ ನಾನು ಅವಳನ್ನ ತಡೆದು, ಕೊನೆಗೆ ನಾನೆ ಒಂದು ಲಕ್ಷ ತಗೊಂಡು ಹೊರಟೆ ಹೇಗಾದರೂ ಮಾಡಿ ಅವರನ್ನ ಒಪ್ಪಿಸೋಣವಂತ, ಇವಾಗ ಅದು ಮುಗಿದು ಹೋದ ಕಥೆ ಆದರು ಅವರು ಎಂಥ ಮನುಷ್ಯ ಅಂತ ನಿಮಗೆ ಗೊತ್ತಾಗಲಿ ಅಂತ ಇವಾಗ ಹೇಳಿದೆ. ನಿಮಗೋಸ್ಕರ ಒಂದು ಪದ್ಯ ಬರಿದಿದಿನಿ ಓದಿ ಸರ್ ಎರಡನೆ ಪುಟದಲ್ಲಿ ಇದೆ"

ಗೋವಿಂದಣ್ಣ:"ಪದ್ಯ ಇನ್ನು ನೆನಪಿದೆನಾ?"

"ಅದು ಮರೆಯೋ ಅಂತ ಪದ್ಯ ಅಲ್ಲ"

ಗೋವಿಂದಣ್ಣ:"ಹೇಳ್ತೀರಾ  ಮೊದಲನೇ ಸರಿ ಓದಿದಾಗ ಅರ್ಥ ಆಗಲಿಲ್ಲ"


           "ಕತ್ತಲು ಕವಿಯಲು ಸುತ್ತಲು ಅರಳಲು,
          ತತ್ತರ ಅದೆನು ನಾನು.............
     
          ಉತ್ತರ ಹುಡುಕುತ ಸುತ್ತಲು ತಿರುಗಲು
          ದೊರಕಲು ಕೇವಲು ಭೀತಿ.
          ಕನಸನ್ನು ತುಳಿದು, ಆಸೆಗೆ ಮಣ್ಣನು ಮಸೆದು
          ದುಬಾರಿ ಆಯಿತು ನೀತಿ.....

          ಕತ್ತಲು ಕವಿಯಲು ಸುತ್ತಲು ಅರಳಲು,
          ತತ್ತರ ಅದೆನು ನಾನು.............
          ನೆತ್ತರು ಹರಿಸಲು, ಕತ್ತಿಯ ಮಸಿಯಲು,
          ಎರಡು ಕೈ ಸಾಲದು ಏನು?........."


      ಈ ಪದ್ಯನ ಹಿಡ್ಕೊಂಡು ಹೊರಗೆ ಓಡಿದೆ ಪುಟ್ಟಣ್ಣಗೆ ಗಾಡಿ ತೆಗಿಯೋಕೆ ಹೇಳಿದೆ ಆದರೆ ಮೇಲೆ ಒಂದು ವಿಮಾನ ಹಾಗೆ ಹಾರಿ ಹೋಯ್ತು, ತುಂಬಾ ದೂರದಲ್ಲಿ ಇತ್ತು  ಚಿಕ್ಕದಾಗಿ ಕಾಣ್ತಾ ಇತ್ತು, ನಾನು ಹಾಗೆ ನೋಡ್ತಾ ಅಲ್ಲೇ ನಿಂತೇ.... ಇವಾಗ ಅರ್ಥ ಆಯ್ತಾ ?

ಗೋವಿಂದಣ್ಣ:"ಹೊಂ!!! ಅವನಿಗೆ ಕಣ್ಣು ಇರಲಿಲ್ಲ ಆದರೆ ದೇವರು ಬುದ್ದಿವಂತಿಕೆ ಬಹಳ ಚೆನ್ನಾಗೇ ಕೊಟ್ಟಿದ್ದಾ,ಎಷ್ಟೋ ಲಕ್ಷ ಜನದಲ್ಲಿ ಇವನೊಬ್ಬ select ಆಗಿರೋದು ದೊಡ್ಡ ವಿಷಯ ಅಲ್ಲ ಬಿಡಿ, ಯಾವಾಗ ಹೋಗ್ತಾ ಇರೋದು ಧರ್ಮಸ್ಥಳಕ್ಕೆ?"

"ನಾಳೆ ಬೆಳಿಗ್ಗೆ 5ಕ್ಕೆ ಬಿಡ್ತೀವಿ"

ಗೋವಿಂದಣ್ಣ:"Happy Journey ಸರ್!!! ಆರಾಮಾಗಿ family, ಮಕ್ಕಳ ಜೊತೆ enjoy ಮಾಡಿ ಬನ್ನಿ, ಹಾಗೆ ಹುಂಡಿ ಅಲ್ಲಿ ನನ್ನ ಹೆಸರಲ್ಲಿ ನೂರು ರೊಪಾಯಿ ಹಾಕಿ, ಬರ್ತಾ ಪ್ರಸಾದ ತಗೊಂಡು ಬನ್ನಿ!!!"

                                           ಮುಕ್ತಾಯ!!!           




No comments:

Post a Comment