EXT.DAY AT THE DOOR(Entrance)
ವೀರೇಶ(28) ಬ್ಯಾಗ್ ಅನ್ನು ತನ್ನ ಹೆಗಲ ಮೇಲೆ ಹೇರಿಸಿಕೊಂಡು ಆಟೋ ಇಂದ ಇಳಿದು ಬಾಗಿಲ ಬಳಿ ಬಂದು ಜೋರಾಗಿ ತಟ್ಟುತ್ತಾನೆ ಬಹಳ ಹೊತ್ತು ತಟ್ಟಿದ ನಂತರ ವಯಸ್ಸಾದ ಕನ್ನಡಕ ಹಾಕಿಕೊಂಡು, ಬಾಯಲ್ಲಿ ಎಲೆ ಅಡಿಕೆ ಜಗೀತಾ ಇರೋ ವೀರೇಶನ ತಂದೆ ಬಂದು ಬಾಗಿಲು ತೆರೆಯುತ್ತಾರೆ, ಒಂದು ಗಳಿಗೆ ಏನು ಮಾತಾಡದೆ ಕನ್ನಡಕ ಏರಿಸಿಕೊಂಡು ಹಾಗೆ ವೀರೇಶನನ್ನ ನೋಡೋ ಅವನ ತಂದೆ ಸ್ವಲ್ಪ ಹೊತ್ತು ಆದಮೇಲೆ ಏನೋ ಗೊತ್ತಾದವರ ತರಾ "ಓಹೋ !!!" ಎಂಬ ಉದ್ಗಾರ ಕೊಟ್ಟು ಬೆನ್ನು ತಿರುಗಿಸಿಕೊಂಡು ಒಳಗೆ ನಡೀತಾರೆ, ಅವರನ್ನ ನೋಡುತ ಸೊಟ್ಟು ಮುಖದಿಂದ ಅಲ್ಲೆ ವೀರೇಶ ನಿಲ್ಲುತ್ತಾನೆ..
[CUT.TO]
INT. TV ROOM(Hall). MOMENTS LATER
ಗೌಡ್ರು (65, ವೀರೇಶನ ತಂದೆ) ಚೇರ್ ಮೇಲೆ ಬಂದು ಕೂತು ಬಾಯಲ್ಲಿ ಇದ್ದ ಎಲೆ ಅಡಿಕೆ ಅನ್ನು ಒಂದು bowl ಅಲ್ಲಿ ಉಗಿದು, ಬಟ್ಟೆ ಇಂದ ತಮ್ಮ ಬಾಯಿ ಒರೆಸು ಕೊಳ್ಳುತ್ತಾರೆ..
ಗೌಡ್ರು
ಏಯ್ ಅದು ಏನ್ ಸ್ನಾನ ಮಾಡ್ತಿ ನಿನ್ ಮಗ ಬಂದವ್ನೆ ನೋಡು ಬಾ ಇಲ್ಲಿ!!! ಗುರತೆ ಹಿಡಿಯೋಕೆ ಆಗೋಲ್ಲ ಎಲ್ಲ ಕಡೆ ಗಡ್ಡ ಬೆಳೆಸ್ಕೊಂಡ್ ಐತೆ ಬಡ್ಡೆತಾವನ್ ತಂದು....... ಇವಾಗೇನು ಅಂತದ್ದು ಗುಡ್ಡೆ ಹಾಕೋಕೆ ಬಂದವನೋ!!!
ಅವ್ವ(V.O)
ಬಂದೆ ಬಂದೆ ಹತ್ತು ನಿಮಿಷ !!!
ರೂಮಿಂದ ಸಿಟ್ಟಿಂದ ಎದ್ದು ಬರೋ ವೀರೇಶ ಒಂದು ಸರಿ ಅವರ ಅಪ್ಪನನ್ನ ಗುರಾಯಿಸ್ತಾನೆ
ವೀರೇಶ
ನಾನು ಏನು ನಿನ್ ತವ ಉಗ್ಸ್ಕೊಳೋಕೆ ಬರಲಿಲ್ಲ!!!!ಏನೋ ಪಾಪ accident ಆಗದೆ ನೋಡ್ಕೊಂಡು ಹೋಗೊವಾ ಅಂತ ಬಂದೆ.
ಗೌಡ್ರು
ಓಹೋ ಓಹೋ!!! ನಂಗೆ ಎಲ್ಲ ಗೊತ್ತಾಯ್ತದೆ ಕಣ್ಲಾ ನಾನು ಸತ್ತಿನೊ ಬದುಕಿನೊ ಅಂತ ನೋಡೋಕೆ ಬಂದಿಯಾ!!! ಎಲ್ಲಿ ಆಸ್ತಿ ಇನ್ನೊಬ್ಬರಿಗೆ ಬರಿದುಕೊಡ್ತೀನಿ ಅಂತ ಓಡಿ ಬಂದಿಯಾ ನೀನು......
ವೀರೇಶ
ಅಂಬಾನಿ ನೀನು ಅಸ್ತಿ ಮಾಡಿ ಮಡಗಿದಿಯಾ ನಾನು ಹೊತ್ತುಕೊಂಡು ಹೋಗೋಕೆ, ಎರಡು ವರ್ಷ ಆದಮೇಲೆ ಬಂದಿವ್ನಿ ಮನೆಗೆ ಹಿಂಗ ಮಾತಾಡೋದು ನೀನು!!!
ಎದ್ದು ಕೈ ಮುಷ್ಠಿ ಕಟ್ಟಿ ವೀರೇಶನ ಬಳಿ ಬರುವ ಅವನ ತಂದೆ, ಲುಂಗಿ ಅನ್ನು ಮೇಲಕ್ಕೆ ಏರಿಸಿ ಕೊಂಡು ಅವನ ಹತ್ತಿರ ಬರುತ್ತಾರೆ. ವೀರೇಶ ಹೆದರಿ ಹಿಂದೆ ಸರಿಯುತ್ತಾನೆ..
ಗೌಡ್ರು
ನಾನು ಇಲ್ಲೇ ಮಲ್ಲಪ್ಪನ ತಾವ ಹೋಗಿ ಬರ್ತೀನಿ, ತಂಬಾಕು ಕಾಲಿ ಆಗೈತೆ.........
ಹೆದರಿ ಹಿಂದೆ ಸರಿದಿದ್ದ ವೀರೇಶ ತನ್ನ ಶರ್ಟ್ ಸರಿ ಮಾಡಿಕೊಂಡು, ಬ್ಯಾಗ್ ಇಂದ ಒಂದು ಕವರ್ ತೆಗೆದು ತನ್ನ ಕೈ ಅಲ್ಲಿ ಹಿಡ್ಕೋತಾನೆ
ವೀರೇಶ
ನಾನು ಬರ್ತೀನಿ ಇರು ಬಹಳ ದಿನ ಆಯಿತು ಅವನನ್ನ ನೋಡಿ.....
[CUT TO.]
EXT. ON THE ROAD.SAME TIME
ಗೌಡ್ರು ಮೆಲ್ಲಕ್ಕೆ ರೋಡ್ ಮೇಲೆ ನಡೆದು ಹೋಗ್ತಾ ಇದ್ದರೆ ವೀರೇಶ ಅವರನ್ನು ಹಿಂಬಾಲಿಸಿ ಅವರ ಸರಿಸಮವಾಗಿ ನಡೆಯುತ್ತಾನೆ..........
ಗೌಡ್ರು
ನೀನು ಯಾಕೆ ಬಂದೆ ನನ್ನ ಹಿಂದೆ ನಾನು ಏನು ಯಾರಿಗು ಆಸ್ತಿ ಬರೆದು ಕೊಡೋಕೆ ಹೋಯ್ತಿಲ್ಲ !!!
ವೀರೇಶ
ನಿಂದು ಒಳ್ಳೆ ಕಥೆ ಆಯಿತು ಮಲ್ಲಪ್ಪ ನೋಡೋಕೆ ಬರ್ತಾ ಇರೋದು. ಅದು ಸರಿ ಅವ್ವ ನಿನಗೆ ಆಕ್ಸಿಡೆಂಟ್ ಆಗೈತೆ ಅಂತು ಫೋನ್ ಅಲ್ಲಿ, ನೋಡಿದರೆ ಮುಖದ ಮೇಲೆ ಎರಡು ಮಾರ್ಕ್ ಬಿಟ್ಟರೆ ಏನು ಕಾಣ್ತಾ ಇಲ್ಲ........ ಏನು ಆಯಿತು?
ಗೌಡ್ರು
ಶಿವ ಏಟು ಶಕೆ, ಮೊದಲು ನಮ್ಮ ಕಾಲದಲ್ಲಿ ಇಷ್ಟು ಅಯ್ತಿರಲಿಲ್ಲ, ನಿಮ್ಮ ಅಂತ ಮನೆಹಾಳು ನನ್ನ ಮಕ್ಕಳು ಹುಟ್ಟಿದಕ್ಕೆ ಈಟೊಂದು ದಗೆ ಅಯ್ತಿರೋದು....... ಅವ್ವ ಅಪ್ಪ ಅಂತ ಚೂರು ಆದರು ಕಾಳಜಿ, ಪ್ರೀತಿ ಐತೆ ಏನಲಾ ನಿನಗೆ ಏನೋ ಎರಡು ಮಾತು ಅಂದೆ ಅಂತ ಮನೆ ಬಿಟ್ಟು ಹೋಯ್ತಾ ಇದ್ದೆ...
ವೀರೇಶ
ಅದು ಏನೋ ಕೆಟ್ಟಗಳಿಗೆ ಇವಾಗ ಬಂದಿದೀನಿ ಆಲ್ವಾ.........ಹೋಗಿದ್ದು ಒಳ್ಳೇದು ಆಯಿತು ಇವಾಗ ಬೆಂಗಳೂರು ಅಲ್ಲಿ ಒಳ್ಳೆ ಕೆಲಸ ನಂದು ತಿಂಗಳಿಗೆ 20,000 ಸಂಬಳ ಬರ್ತದೆ........ಇಲ್ಲಿ ಇದ್ದಿದ್ದರೆ ಏನು ಕಿಸಿದು ದಬ್ಬಾಕಕ್ಕೆ ಅಯ್ತಿರಲಿಲ್ಲ ...... ಆಗೋದು ಎಲ್ಲ ಒಳ್ಳೇದಕ್ಕೆ....
ಗೌಡ್ರು
ನಾನು ಮಾರನಳ್ಳಿ ಕ್ರಾಸ್ ತಾವ ಗಾಡಿ ನಿಲ್ಸಿ ಸೀಬೆ ಕಾಯಿ ಕಿತ್ತಾ ಇದ್ದೆ ಒಂದು ಕಾಯಿ ರೋಡ್ ಮ್ಯಾಕೆ ಹೂತು ಬಗ್ಗಿ ತಗೊಳ್ತಾ ಇದೀನಿ ಯಾವನೋ ಕಾರ್ ಅಲ್ಲಿ ಜೋರಾಗಿ ಬಂದು ಮುಂದಿಂದ ಗುದ್ದಿದ ನಾನು ತಕ್ಷಣ ತಲೆ ತೆಗೆದೆ ಆದರೂ ಏಟು ಸ್ವಲ್ಪ ಜೋರಾಗಿ ಬಿತ್ತು...........
ವೀರೇಶ
ಅವ್ವ ಅದು ಏನೋ ಆಪರೇಷನ್ ಮಾಡ್ಸಬೇಕು ಅಂತ ಹೇಳ್ತಿತ್ತು, ಏನು ಆಗದೆ ?
ಗೌಡ್ರು
Tension ಆ ಅದೆಲ್ಲ ಆಗಕಿಲ್ಲ ನನಗೆ, ದ್ಯಾವರಿಗೆ ಗೊತ್ತದೆ ನನಗೆ ಏನಾದರು ಆದರೆ ನಿಮ್ಮ ಅವ್ವನ ನೋಡ್ಕೊಳೋರು ಯಾರು ಇಲ್ಲ ಅಂತ, ಅದುಕ್ಕೆ ಉಳ್ಸವ್ನೆ ನನ್ನ, ನಿಂಗೇನು ಗೊತ್ತಲಾ ಶಟ್ಕೊಂಡು ಊರು ಬಿಟ್ಟು ಹೋದೆ ನಿಮ್ಮವ್ವ ನಿನ್ನ ನೆನಸ್ಕೊಂಡು ಅಳದೆ ಇರೋ ದಿನಗಳು ಇಲ್ಲ...........
ವೀರೇಶ
ನಾನು ಏನೋ ಕೇಳ್ತಾ ಇದೀನಿ ನೀನು ಏ....
ವೀರೇಶನ ಮಾತು ಕೇಳದೆ ಹಾಗೆ ಮುಂದೆ ನಡೆಯುವ ಅವನ ತಂದೆ ಹೋಗಿ ಮಲ್ಲಪ್ಪನ ಅಂಗಡಿಯ ಕಟ್ಟೆ ಮೇಲೆ ಕುಳಿತುಕೊಳ್ಳುತ್ತಾರೆ.... ವೀರೇಶ ಸಣ್ಣ ಮುಖ ಮಾಡಿ ಮುಂದೆ ನಡೆಯುತ್ತಾನೆ...
ಮಲ್ಲಪ್ಪ
ಏನ್ರೀ ಗೌಡ್ರೆ ಏನ್ ಸಮಾಚಾರ ಒಂದು ಪಾನ್ ಕಟ್ಟೋಣು ಏನು?
ಗೌಡ್ರು
ಎರಡು ಮಧು ಕೊಡು ಹಂಗೆ ಒಂದು ಪಾನ್ ಕಟ್ಟು ಸುಣ್ಣ ಕಡಿಮೆ ಹಾಕಿ
ಮಲ್ಲಪ್ಪ(ವೀರೇಶನನ್ನ ನೋಡಿ)
ಯವ್ವಿ ಯವ್ವಿ ಏನು ಗೌಡ್ರೆ ಯಾರ್ ಇದ, ಏನಲೇ ಬಾಡ್ಯಾ ಇವಾಗ ನೆನಪಿಗ ಬಂತ ಈ ಊರ, ಎಲ್ಲ ಹೋಗಿದ್ದಿ?ಏನ್ ಮಾಡಿದಿ?
ವೀರೇಶ
ಅದೆಲ್ಲ ದೊಡ್ದು ಕಥೆ ಬಿಡು ಮಲ್ಲಪ್ಪ ಅದು ನಿನಗೆ ಆಮೇಲೆ ಹೇಳ್ತಿನಿ.......
ಅಂಗಡಿ ಒಳಗೆ ಹೋಗೋ ವೀರೇಶ ಮಲ್ಲಪ್ಪ ಕೀವಿ ಅಲ್ಲಿ ಪಿಸುಗುಡುತ್ತಾನೆ....
ವೀರೇಶ
ನಾನು ಹೋಗ್ತಾ ಅವಳಿಗೆ ಹೇಳಿ ಹೋಗಿದ್ದೆ ಆದಷ್ಟು ಬೇಗ ಬಂದು ನಿನ್ನ ಮದುವೆ ಆಗ್ತೀನಿ ಅಂತ.......ಅವಳಿಗೆ ಅಂತ ರೇಷ್ಮೆ ಸೀರೆ ತಂದಿದೀನಿ ಅವಳು ಇವಾಗ ಇಲ್ಲೇ ಇದಾಳ ಹಳ್ಳಿ ಅಲ್ಲಿ ಇದಾಳ?......
ಮಲ್ಲಪ್ಪ
ಅಯ್ಯೋ ದಡ್ಡ ನಿನಗ ಆವಾಗಲೇ ನಾ ಹೇಳಿದ್ದೆ ಅವಳು ನಿನ್ನ ಜೊತೆ ಆಟ ಆಡಾಕತ್ತಾಳ, ಹುಡುಗೀರಿಗೆ ನೀವೆಲ್ಲ ದವಾಖಾನೆಯಾಗ್ ಕೊಡೊ ಮಾತ್ರೆ ಇದ್ದಂಗ ಜ್ವರ ಬಂದಾಗ ಮಾತ್ರ ತೊಗೋತಾರ ಬ್ಯಾಡಾದಾಗ ಮೂಲೆಗ ವೊಸಿತಾರ...
ವೀರೇಶ
ಇವಾಗ ಆವ್ಳು ಎಲ್ಲಿ ಅವಳೆ?
ಮಲ್ಲಪ್ಪ
ಆ!!! ಆಗೋ ಅಲ್ಲಿ ನಿನಗ ಒಬ್ಬಳು ಮುದುಕಿ ಕಾಣಾಕತ್ತಾಳೇನು....
ವೀರೇಶ
ಹಾ!
ಮಲ್ಲಪ್ಪ
ಅಕಿ ಕೈ ಆಗ ಇರೋ ಒಂದು ವರ್ಷದ ಮಗು ನಿಮ್ಮ ಹುಡಿಗಿದ್.......ಆ ಮುದುಕಿ ಅವಳ ಅತ್ತಿ......ಭೂಮಿ ಸುತ್ತತೈತೋ ಸುತ್ತತೈತಿ ಎರಡು ವರ್ಷ ಹಿಂದೆ ಇದ್ದ ಊರು ಇವಾಗ ಇಲ್ಲ.....
ವೀರೇಶನ ತಂದೆ ಕಟ್ಟೆಯಿಂದ ಎದ್ದು ಪಾನ್ ಕಟ್ಟಿಸಿಕೊಳ್ಳೋಕೆ ಬರುತ್ತಾರೆ ವೀರೇಶ ಬೇಸರ ಇಂದ ಕೂತಿರುವುದನ್ನ ನೋಡಿ ಆಶ್ಚರ್ಯ ಪಡುತ್ತಾರೆ , ಮಲ್ಲಪ್ಪ ಪಾನ್ ಕಟ್ಟಲು ಶುರು ಮಾಡುತ್ತಾನೆ.....
ಮಲ್ಲಪ್ಪ
ಗೌಡ್ರೆ ಮಗಂಗೆ ಲಗೂನೆ ಒಂದು ಹುಡುಗಿ ನೋಡಿ ಮದುವೆ ಮಾಡ್ರಲ್ಲ, ನೋಡ್ರಿ ತಕ್ಕಡಿ ಇಲ್ಲದೆ ವ್ಯಾಪಾರ ಹೆಣ್ಣಮಗಳು ಇಲ್ಲದೆ ಸಂಸಾರ ಎರಡು ಆಗಾಕಿಲ್ಲ....,....
ಗೌಡ್ರು
ಸ್ವಲ್ಪ ಉದ್ದ ಆಯಿತು ಕಟ್ಟು ಮಾಡು........
ಮಲ್ಲಪ್ಪ
ಏನಾ?
ಅಪ್ಪ(ಗೌಡ್ರು)
ಎಲೆ ಸ್ವಲ್ಪ ಉದ್ದ ಆಯಿತು ಕಟ್ ಮಾಡು!!!
ಪಾನ್ ಹಾಕಿಕೊಂಡು ವೀರೇಶನ ತಂದೆ ಮನೆಯ ದಾರಿ ಹಿಡಿಯುತ್ತಾರೆ , ಅಂಗಡಿ ಅಲ್ಲೇ ಕೂತಿದ್ದ ವೀರೇಶ ಎದ್ದು ಹೊರಡೋ ಆಲೋಚನೆ ಮಾಡುತ್ತಾನೆ
ಮಲ್ಲಪ್ಪ
ಲೇ ಈ ಕವರ್ ತಗೊಂಡು ಹೋಗು ನನ್ನ ಹೆಂಡರ ಏನಾದರು ಬಂದರೆ ಮುಗಿತು ಉಳಿಯೋಲ್ಲ ಸೀರಿ.
ವೀರೇಶ
(ಬೇಸರ ದಿಂದ)
ತಗೊಳ್ಳಿ ಬಿಡು..
ಮಲ್ಲಪ್ಪ
ಲೇ ನಿಮ್ಮ ಅವ್ವನಿಗೆ ತಗೊಂಡು ಹೋಗಿ ಆದರು ಕೊಡು, ಅಪ್ಪ ಅವ್ವನಿಗೋಸ್ಕರ ಬದಕಲೆ, ನೀನು ಕೊಲೆ ಮಾಡಿದರೆ ಕೊಲೆಗಾರ, ಕಳ್ಳತನ ಮಾಡಿದರೆ ಕಳ್ಳ, ದುಡ್ಡು ಮಾಡಿದರೆ ಶ್ರೀಮಂತ ಆದರೆ ನಿಮ್ಮ ಅಪ್ಪ--ಅವ್ವನಿಗೆ ಯಾವಾಗಲು ನೀನು ಮಗ ಅದು ಮರೀಬೇಡ........
ಸ್ವಲ್ಪ ಹೊತ್ತು ಅಲ್ಲೆ ಹಾಗೆ ಪಾನು ಕಟ್ಟುತಿರುವ ಮಲ್ಲಪ್ಪ ಅನ್ನು ನೋಡುವ ವೀರೇಶ ಅಂಗಡಿ ಒಳಗೆ ಬಂದು ಕವರ್ ತಗೊಂಡು ಓಡುತ್ತಾನೆ..............ಮಲ್ಲಪ್ಪ ಅವನನ್ನ ನೋಡುತ್ತಾ ಹೆಮ್ಮೆ ಇಂದ ಮುಗುಳ್ ನಗುತ್ತಾನೆ....
[CUT TO:]
EXT. ON THE ROAD(BACK TO HOME)
ಮುಂದೆ ಮೆಲ್ಲಗೆ ನಡೆದು ಹೋಗುತ್ತಿರುವ ವೀರೇಶನ ಅಪ್ಪ, ಹಿಂದೆ ಇಂದ ಓಡಿ ಬರುವ ವೀರೇಶ ಅಪ್ಪನ ಕೈ ಹಿಡಿದು ಕೊಳ್ಳುತ್ತಾನೆ, ಜೋರಾಗಿ ಸ್ವಲ್ಪ ಹೊತ್ತು ಉಸಿರಾಡಿ. . . . . . . . . .
ವೀರೇಶ
ಅಪ್ಪಯ್ಯ!!! ನಿಂತ್ಕೋ, ಇನ್ನು ನೀನು ನನ್ನ ಈ ತರ ಜೊತೆ ಬರೋಲ್ಲ ಅಂತ ಬಿಟ್ಟು ಮುಂದೆ ಹೋಗ್ಬೇಡ, ತಪ್ಪ ಆಯಿತು ನಂದು ತಪ್ಪ ಆಯಿತು!!!
ಗೌಡ್ರು
ಏನಲಾ ನಿಂದು ಬಾದೆ?
ವೀರೇಶ
ನಿಂಗೆ ನೆನಪು ಇದೇನಾ ಅಪ್ಪಯ್ಯ, ಒಂದು ಸರಿ ಚಿನ್ನಪ್ಪ ಸಾರ್ ನಂಗೆ ಶಾಲೆ ಅಲ್ಲಿ ಹೊಡೆದಾಗ, ನೀನು ಬಂದು "ನನ್ನ ಮಗಿಗೆ ಹೊಡಿದರೆ ನಾನು ಹೊಡಿಬೇಕು ಬೈದರೆ ನಾನು ಬೈ ಬೇಕು, ನೀನ್ ಯಾವನ್ಲಾ ದೊಣ್ಣೆ ನಾಯಕ!!!" ಅಂತ ದಬಾಯಿಸಿದ್ದೆ.........ನಾನೆ ನಿನ್ನ ಅರ್ಥ ಮಾಡ್ಕಳಿಲ್ಲ ದಡ್ಡ ನಾನು, ಇವಾಗ......!!!!
ಹಿಂದೆ ಇಂದ ಬರುವ ವೀರೇಶನ ಹಳೆಯ ಸ್ನೇಹಿತ ಬೋರ(28), ಬಂದು ವೀರೇಶನನ್ನ ಆಶ್ಚರ್ಯದಿಂದ ನೋಡುತ್ತಾನೆ ವೀರೇಶ ಅವನ ಮಾತನ್ನು ನಿಲ್ಲಿಸಿ ಅಪ್ಪನ ಕೈ ಬಿಟ್ಟು ಬೋರನನ್ನು ಅಪ್ಪಿಕೊಳ್ಳುತ್ತಾನೆ ..........ಅವರಿಬ್ಬರು ಮಾತಾಡುವುದ್ದನ್ನು ನೋಡಿ ಅಪ್ಪ ಮುಂದೆ ಮನೆಗೆ ನಡೀತಾರೆ......ಇಬ್ಬರು ಹಾಗೆ ಮಾತಾಡುತ ಮುಂದೆ ನಡೀತಾರೆ....
ಬೋರಾ
ಮತ್ತೆ ಏನಲಾ ಬೆಂಗ್ಳೂರಾಗೆ ಏನ್ ಮಾಡ್ದೆ ಎಲ್ಲಿ ಇದ್ದೆ!!!
ವೀರೇಶ
ಅದೆಲ್ಲ ದೊಡ್ಡ ಕಥೆ ಸಂಜೆ ಸಿಗು ಹೇಳ್ತೀನಿ, ಮನೆಯಲ್ಲಿ ಎಲ್ಲ ಚನಾಗ್ವರಾ?
ಬೋರಾ
ಹೂ!!! ಅದು ಸರಿ ನಿಮ್ಮ ಅಪ್ಪಯ್ಯನಿಗೆ ಏನೋ ಹೇಳ್ತಾ ಇದ್ದೆ ಕಿವಿ ಕೇಳಿಸುತ್ತೋ ಇಲ್ವೋ ಅಂತ ನೀನು ಒಂದು ಸರಿ ನೋಡ್ತಾ ಇದ್ದೀಯಾ
ವೀರೇಶ
ಅಂದರೆ ನಮ್ಮಪ್ಪಂಗೆ ಕಿವಿ......!!!!
[CUT TO:]
INT. IN THE HOME(Hall)
ಚೇರ್ ಮೇಲೆ ಕೂತು ತೆರೆದಿರುವ ಬಾಗಿಲ ಆಚೆ ಇರುವ ಗೇಟ್ ಅನ್ನು ನೋಡುತ್ತಿರುವ ಗೌಡ್ರು, ಯೋಚನೆ ಅಲ್ಲಿ ಮುಳಗಿರುತ್ತಾರೆ
ಅವ್ವ
ಎಲ್ಲಿ ವೀರೇಶ(ಕೈ ಸನ್ನೆ ಮಾಡುತ್ತ)?
ಅಪ್ಪ
(In High Pitch Voice)
ಅವನು ಬೋರನ ಜೊತೆ ಮಾತಾಡ್ತಾ ಬರ್ತವ್ನೆ ಇಲ್ಲೆ ಅವನೆ!!!
ಅಮ್ಮ
ಏನಂದಾ ಮಗ ಬಂದು ತಕ್ಷಣ ನೀವು ಅವನಿಗೆ ಬೈಯೋದಾ!!!
ಅಪ್ಪ
ಇವಾಗ ಬರ್ತಾ ಬಂದು ನನ್ನ ಕೈ ಹಿಡ್ಕೊಂಡ ಏನೋ ಹೇಳ್ದ ಆದರೆ ನನಗೆ ಎಲ್ಲಿ ಗೊತ್ತಾಗ್ಬೇಕು....ಏನು ಹೇಳಿದನೋ ಗೊತ್ತಿಲ್ಲ ಆದರೆ ಅವನು ಆ ತರ ನನ್ನ ಜೊತೆ ಯಾವತ್ತೂ ಮಾತಾಡಿಲ್ಲ.......
EXT. ON THE ROAD
ವೀರೇಶ ಬೋರಾ ನಡೀತಾ ಮನೆ ಮುಂದೆ ಬಂದು ನಿಲ್ಲುತ್ತಾರೆ.......
ಬೋರಾ
ನೀನು ಹೇಳಿದ್ದು ನಿಮ್ಮ ಅಪ್ಪಂಗೆ ಏನು ಗೊತ್ತಾಗಿರೋಲ್ಲ!!! ಮೊದಲು ಅದು ಯಾವುದೊ machine ತಂದು ಕೊಡು ನಿಮ್ಮ ಅಪ್ಪಯ್ಯನಿಗೆ......ಬಹಳ ತಡ ಮಾಡಿದರೆ ಒಳ್ಳೇದು ಅಲ್ಲ.......
ವೀರೇಶ ಗೇಟ್ ಬಳಿ ನಿಂತಿರೋದನ್ನ ಒಳಗೆ ಇದ್ದ ಅಪ್ಪ-ಅಮ್ಮ ಇಬ್ಬರು ನೋಡುತ್ತಾರೆ, ಅಮ್ಮ ಖುಷಿ ಇಂದ ಹೋರ ನಡಿಯುತ್ತಾರೆ......
ಅವ್ವ
(ಸೆರಗಿಂದ ತನ್ನ ಕಣ್ಣು ಒರೆಸುಕೊಳ್ಳುತ್ತ)
ಏಟು ಉದ್ದ ಬೆಳದೀಯಾ, ಏಯ್ ಈ ಗಡ್ಡ ಮೊದಲು ತೇಗಿ ಚೆನ್ನಾಗಿ ಕಾಣಾಕಿಲ್ಲ ನಿನಗೆ, ತಡಿ ಇಲ್ಲೇ ಇರು ಶ್ಯಾಮಕ್ಕ, ಮುನಿಯಮ್ಮ ಕರ್ಕೊಂಡು ಬರ್ತೀನಿ ಅವರು ನಿನ್ನ ನೋಡ್ಬೇಕು ಅಂತ ಇದ್ದರು
ಆದರೆ ವೀರೇಶ ಚೇರ್ ಮೇಲೆ ಕೂತಿರುವ ಅವನ ಅಪ್ಪನನ್ನೇ ನೋಡುತ್ತಿರುತ್ತಾನೆ....ಒಂದು ಗಳಿಗೆ ನೋಡಿದರು ನೋಡದೆ ಇರೋ ಹಾಗೆ ಮುಖ ಆಕಡೆ ತಿರುಗಿಸುವ ಗೌಡ್ರು ನಂತರ ವೀರೇಶನ ಕಡೆಗೆ ಮತ್ತೆ ನೋಡಿದಾಗ ಅವನು ಇನ್ನು ಅವರನ್ನೇ ನೋಡುತ್ತಿರುತ್ತಾನೆ, ಅವರು ಇನೊಮ್ಮೆ ಮತ್ತೆ ಆ ಕಡೆ ತಿರುಗಿ ಇವನ ಬಳಿ ನೋಡಿದಾಗ ಅವನು ಬೋರನ ಜೊತೆ ಮಾತಾಡುತ್ತ ಇನ್ನು ಇವರ ಬಳಿಯೇ ಗಮನ ಇಟ್ಟಿರುತ್ತಾನೆ, ಗೌಡ್ರು ಕೊನೆಗೆ ಕಣ್ಣು ತುಂಬಾ ಅವನನ್ನು ಒಮ್ಮೆ ನೋಡಿ ಮನ ತುಂಬಿ ಮುಗುಳ್ ನಗುತ್ತಾರೆ, ಅವರನ್ನ ನೋಡುತ ವೀರೇಶನು ನಗುತ್ತಾನೆ................
ವೀರೇಶ
ಮಾತಿಗೆ ಕಿವಿ ಬೇಕು ಪ್ರೀತಿಗೆ ಮನಸ್ಸು ಸಾಕು, ಇಲ್ಲ ಬೋರಾ ನಾನು ಹೇಳಿದ್ದು ಅಪ್ಪಯ್ಯನಿಗೆ ಎಲ್ಲ ಕೇಳಿಸಿದೆ!!!ಅವರಿಗೆ ಅನಿಸಿದೆ ತನ್ನ ಮಗ ಇರಬೇಕಾದ ಸಮಯದಲ್ಲಿ ಜೊತೆಗೆ ಇದಾನೆ.
[Close up on veeresh fathers smiling face]
FADE OUT.
CREDITS.
END.